Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಉದ್ಯೋಗ ವಾರ್ತೆ | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹುದ್ದೆಗಳ ನೇಮಕ

06:31 PM May 24, 2024 IST | suddionenews
Advertisement

ಸುದ್ದಿಒನ್, ಬೆಂಗಳೂರು, ಮೇ. 24 :ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಒಟ್ಟು 902 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಇಂಜಿನಿಯರ್(ವಿದ್ಯುತ್), 17 ಸಹಾಯಕ ಇಂಜಿನಿಯರ್(ಸಿವಿಲ್), 15-ಕಿರಿಯ ಇಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ. 535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಇಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ.

Advertisement

ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದವರಾಗಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರು. ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು.

ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.

Advertisement

Advertisement
Tags :
bengaluruchitradurgaJob newssuddionesuddione newsಉದ್ಯೋಗ ವಾರ್ತೆಕರ್ನಾಟಕ ವಿದ್ಯುತ್ ಪ್ರಸರಣ ನಿಗಮಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹುದ್ದೆಗಳ ನೇಮಕ
Advertisement
Next Article