ಜೆಡಿಎಸ್ ಕುಟುಂಬದ ಸ್ವತ್ತಲ್ಲ : ಇಬ್ರಾಹಿಂ ಕೆಂಡಾಮಂಡಲ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿಯಿಂದಾಗಿ ಸಾಕಷ್ಟು ಕಾರ್ಯಕರ್ತರು ಬೇಸರ ಮಾಡಿಕೊಂಡಿದ್ದಾರೆ. ಇದೀಗ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬೇಸರ ಹೊರ ಹಾಕಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಬೇಸರ ಹೊರ ಹಾಕಿದ್ದಾರೆ.
ಜೆಡಿಎಸ್ ನದ್ದು ಜಾತ್ಯಾತೀತ ಸಿದ್ಧಾಂತ, ಬಿಜೆಪಿಯದ್ದು ಬೇರೆಯದ್ದೇ ಸಿದ್ಧಾಂತ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ(NDA) ಮೈತ್ರಿಕೂಟ ಸೋಲಬೇಕಿದೆ. ನಾನು ಅಧ್ಯಕ್ಷ. ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಜೆಡಿಎಸ್ ಕುಟುಂಬದ ಸ್ವತ್ತಲ್ಲ ಎಂದಿದ್ದಾರೆ.
ಒರಿಜಿನಲ್ ಜೆಡಿಎಸ್ ನಮ್ಮದೇ. ನಮ್ಮನ್ನು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೆದ್ದಿದ್ದು ಹೇಗೆ..? ಕುಮಾರಸ್ವಾಮಿ ಎಂಎಲ್ಎ ಆಗಿದ್ದಕ್ಕೆ ಅಮಿತ್ ಶಾ ಕರೆದಿದ್ದು. ಮುಸ್ಲಿಮರು ಮತ ಹಾಕದಿದ್ದರೆ, ಸೋತು ಮನೆಯಲ್ಲಿ ಇರಬೇಕಿತ್ತು. ಕುಮಾರಸ್ವಾಮಿ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ. ಈಗಲೂ ಅವಕಾಶ ಇದೆ. ಬಿಜೆಪಿ ಜೊತೆ ಹೋಗಲ್ಲ. ಕೋರ್ ಕಮಿಟಿ ರಚನೆ ಮಾಡುತ್ತೇವೆ. ಜೆಡಿಎಸ್ ನ ಎಲ್ಲಾ ಶಾಸಕರನ್ನು ಸಂಪರ್ಕ ಮಾಡುತ್ತೇವೆ. ಪಕ್ಷ ಕುಟುಂಬದ ಸ್ವತ್ತು ಅಲ್ಲ, ಸರ್ವರ ಅಭಿಪ್ರಾಯ ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಆದರೆ ಅವರ ತತ್ವ ಸಿದ್ದಾಂತ, ತತ್ವ ಬೇರೆ ಬೇರೆಯಾಗಿದೆ. ಯಾರನ್ನ ನಂಬಿದ್ದೀರಿ ಅವರೇ ನಿಮಗೆ ಕೈಕೊಟ್ಟರು. ನಮ್ಮ ಮನೆಯಲ್ಲಿ ನಾವೂ ಇದ್ದೇವೆ. ಪರದೆ ಮೇಲೆ ಏನಾಗುತ್ತೆ ಎಂಬುದನ್ನು ನೋಡಬೇಕು ಎಂದು ಹೇಳುವ ಮೂಲಕ ಮೈತ್ರಿ ಬಗ್ಗೆ ಮತ್ತೆ ಬೇಸರ ಹೊರ ಹಾಕಿದ್ದಾರೆ.