For the best experience, open
https://m.suddione.com
on your mobile browser.
Advertisement

ಮತ್ತೊಂದು ಹೋರಾಟಕ್ಕೆ ಸಜ್ಜಾದ ಜಯ ಮೃತ್ಯುಂಜಯ ಸ್ವಾಮೀಜಿ : ಹೋರಾಟ ಹೇಗಿರುತ್ತೆ..?

08:54 PM Dec 11, 2024 IST | suddionenews
ಮತ್ತೊಂದು ಹೋರಾಟಕ್ಕೆ ಸಜ್ಜಾದ ಜಯ ಮೃತ್ಯುಂಜಯ ಸ್ವಾಮೀಜಿ   ಹೋರಾಟ ಹೇಗಿರುತ್ತೆ
Advertisement

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕು ಎಂದು ಬೃಹತ್ ಮಟ್ಟದ ಹೋರಾಟವನ್ನೇ ನಿನ್ನೆ ಬೆಳಗಾವಿಯಲ್ಲಿ ಮಾಡಿದರು. ಈ ವೇಳೆ ಲಾಠಿ ಚಾರ್ಜ್ ಕೂಡ ನಡೆದಿದೆ. ಕಲ್ಲು ತೂರಾಟವೂ ಆಗಿದೆ. ನಿನ್ನೆ ನಡೆದ ಘಟನೆಯಿಂದ ಆಕ್ರೋಶಗೊಂಡ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು. ಎರಡನೇ ಹೋರಾಟಕ್ಕೂ ಕರೆ ನೀಡಿದರು.

Advertisement

ಇಂದು ಎರಡನೇ ಹೋರಾಟದ ಬಗ್ಗೆ ಮಾತಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ನಾಳೆ ಹೀರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ತಡೆದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಸೋಮವಾರದಿಂದ ಅಧಿವೇಶನ ಮುಗಿಯುವ ತನಕವೂ ಹೋರಾಟ ಮಾಡುತ್ತೇವೆ. ಸುವರ್ಣಸೌಧದ ಕೊಂಡಸಕೊಪ್ಪದ ಬಳಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಮುಂದುವರೆದು ಸಿಎಂ ವಿರುದ್ಧ ಹರಿಹಾಯ್ದ ಸ್ವಾಮೀಜಿ, ರಾಜ್ಯದಲ್ಲಿ ಈಗ ಇರುವುದು ಲಿಂಗಾಯತ ವಿರೋಧಿ ಸರ್ಕಾರ. ಲಾಠಿ ಚಾರ್ಜ್ ಮಾಡಿರುವ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಅಮಾನತು ಮಾಡದೆ ಹೋದರೆ ನೀವೇ ಆದೇಶ ಮಾಡಿದ್ದೀರಿ ಎಂದುಕೊಳ್ಳುತ್ತೇವೆ. ಎಫ್ಐಆರ್ ರದ್ದು ಮಾಡುವಂತೆ ಹೋರಾಟ ನಡೆಸುತ್ತೇವೆ. ನಾವೂ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿಲ್ಲ. ಮುಖ್ಯಮಂತ್ರಿಗಳ ಭೇಟಿಗೆ ಹೋಗುತ್ತಿದ್ದೆವು. ಆಗ ಹೆದ್ದಾರಿಯನ್ನು ಹಾರಿಕೊಂಡು ಹೋಗಬೇಕಿತ್ತಾ..? ವಕೀಲರ ಮೂಲಕವೇ ಎಲ್ಲವನ್ನು ಎದುರಿಸುತ್ತೇವೆ. ನಿನ್ನೆ ಪ್ರತಿಭಟನೆಯ ವೇಳೆ ಬಂದಂತ ಸಚಿವರು ಸಿಎಂ ಅವರ ಸಂದೇಶವನ್ನು ಹೇಳಬೇಕಿತ್ತು. ಆದರೆ ಅವರು ನಿಮ್ಮ ಅಭಿಪ್ರಾಯವನ್ನು ಕೇಳಲು ಬಂದಿದ್ದೇವೆ ಎಂದು ಹೇಳಿದರು. ಹೀಗಾಗಿ ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಲೇಬೇಕೆಂದು ಒತ್ತಾಯಿಸಿದರು ಎಂದು ನಿನ್ನೆಯ ಘಟನೆ ಬಗ್ಗೆ ತಿಳಿಸಿದರು.

Advertisement

Tags :
Advertisement