For the best experience, open
https://m.suddione.com
on your mobile browser.
Advertisement

ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ : ಟಿಕೆಟ್ ಕೈ ತಪ್ಪಿದ್ದಕ್ಕೆ ಮಂಗಳಾ ಅಂಗಡಿ ಹೇಳಿದ್ದೇನು..?

03:11 PM Mar 15, 2024 IST | suddionenews
ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ   ಟಿಕೆಟ್ ಕೈ ತಪ್ಪಿದ್ದಕ್ಕೆ ಮಂಗಳಾ ಅಂಗಡಿ ಹೇಳಿದ್ದೇನು
Advertisement

ಬೆಳಗಾವಿ: ಟಿಕೆಟ್ ಸಿಗದ ಕಾರಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಗೆ ಬಿಜೆಪಿ ಲೋಕಸಭಾ ಆಫರ್ ನೀಡಿತ್ತು. ಹೀಗಾಗಿ ಕಾಂಗ್ರೆಸ್ ತೊರೆದು‌ ಮತ್ತೆ ಬಿಜೆಪಿಗೆ ಬಂದರು. ಹುಬ್ಬಳ್ಳಿ-ಧಾರಾವಾಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಬೆಳಗಾವಿಯಲ್ಲಿ ಟಿಕೆಟ್ ಸಿಕ್ಕಿದೆ ಎನ್ನಲಾಗಿದೆ. ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆ ನಿಲ್ಲುವ ಆಸಕ್ತಿ‌ ಇರಲಿಲ್ಲ. ಮಂಗಳಾ ಅಂಗಡಿ ಅವರ ಕುಟುಂಬ ಆಕಾಂಕ್ಷಿಯಾಗಿದ್ದರು. ಆದರೆ ಇದೀಗ ಜಗದೀಶ್ ಶೆಟ್ಟರ್ ಹೆಸರು ಫೈನಲ್ ಆಗಿದೆ.

Advertisement
Advertisement

ಈ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವೆಉ ಪ್ರತಿಕ್ರಿಯೆ ನೀಡಿ, ಶೆಟ್ಟರ್ ಅವರಿಗೆ ಬೆಳಗಾವಿಯಿಂದ ಸ್ಪರ್ಧೆ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ಕೊನೆಯಲ್ಲಿ ಬೆಳಗಾವಿ ಸ್ಪರ್ಧೆಗೆ ಅವರು ಒಪ್ಪಿಕೊಂಡಿದ್ದಾರೆ. ಗೆಲ್ಲುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

Advertisement

Advertisement
Advertisement

ಇದೇ ವೇಳೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಗಳಾ ಅಂಗಡಿ ಕೂಡ ಮಾತನಾಡಿದ್ದಾರೆ. ಎರಡನೇ ಪಟ್ಟಿಯಲ್ಲಿಯೂ ನಮ್ಮ ಕುಟುಂಬದ ಹೆಸರು ಬಂದಿರಲಿಲ್ಲ. ಹೀಗಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದೆ. ಆದರೆ ಅಷ್ಟರಲ್ಲಾಗಲೇ ಬೆಳಗಾವಿಯ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದ್ದರು ಎಂಬುದು ತಿಳಿಯಿತು. ಹೀಗಾಗಿ ವಾಪಾಸ್ ಬಂದೆವು. ಶೆಟ್ಟರ್ ಮೊದಲು ನಿಂತುಕೊಳ್ಳಲ್ಲ ಎಂದೇ ಹೇಳಿದ್ದರು. ಬಳಿಕ ಹೈಕಮಾಂಡ್ ನಾಯಕರು ಹೇಳಿದ ಬಳಿಕ ಓಕೆ ಎಂದಿದ್ದಾರೆ. ಶೆಟ್ಟರ್ ನಿಂತುಕೊಂಡರೆ ಅವರ ಜೊತೆಗೆ ಕೆಲಸ ಮಾಡುತ್ತೇನೆ. ಟಿಕೆಟ್ ಮಿಸ್ ಆದಾಗ ಆರಂಭದಲ್ಲಿ ಈ ರೀತಿ ಆಗುವುದು ಸಹಜ. ಈಗಾಗಲೇ ಶಾಸಕರು, ಕಾರ್ಯಕರ್ತರ ಜೊತೆಗೆ ಶೆಟ್ಟರ್ ಅವರು ಮಾತನಾಡಿದ್ದಾರೆ ಎಂದು ಶೆಟ್ಟರ್ ಗೋ ಬ್ಯಾಕ್ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ.

Advertisement
Tags :
Advertisement