Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿವಮೊಗ್ಗ ಸೇರಿ ಹಲವು ಭಾಗಗಳಲ್ಲಿ ಮುಂದಿನ 3 ದಿನ ಬಾರೀ ಮಳೆ

01:03 PM Aug 06, 2024 IST | suddionenews
Advertisement

ಬೆಂಗಳೂರು: ಕರ್ನಾಟಕದಾದ್ಯಂತ ಕಳೆದ ಕೆಲವು ದಿನಗಳಿಂದ ಬೆಂಬಿಡದೆ ಮಳೆ ಸುರಿಯುತ್ತಿದೆ. ಹಲವು ಕಡೆ ಬೆಳೆ ಹಾನಿಯಾಗಿದೆ, ಜೀವ ಹಾನಿಯಾಗಿದೆ, ಮನೆಗಳು ಕುಸಿತಗೊಂಡಿವೆ. ಇನ್ನು ಮೂರು ದಿನಗಳ ಕಾಲ ಮಳೆ ಬೆಂಬಿಡದೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಬೆಂಗಳೂರು ಸೇರಿ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರೀ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದ ಕೆಲವು ಭಾಗಗಳಲ್ಲಿಯೂ ಇಂದಿನಿಂದ ಮೂರು ದಿನಗಳ ಕಾಲ ಜೋರು ಮಳೆಯಾಗಲಿದೆ.

 

Advertisement

ಬೆಂಗಳೂರಿನಲ್ಲಿ ಈಗಾಗಲೇ ಕಳೆದ ಮೂರು ದಿನದಿಂದ ಮಳೆಯ ಆರ್ಭಟ ನಿಂತಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಕಡಿಮೆಯಾಗುವುದಿಲ್ಲ. ಈಗಾಗಲೇ ತಂಪು ಗಾಳಿ ಬೀಸುತ್ತಿದ್ದು, ಸಂಜೆ ವೇಳೆಗೆ ಜೋರು ಮಳೆಯಾಗಲಿದೆ. ಹೀಗಾಗಿ ನಗರದಲ್ಲಿ ಹೊರಗೆ ಹೋಗುವವತು ಕೊಂಚ ಎಚ್ಚರವಹಿಸಬೇಕಾಗಿದೆ. ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಹೊರಗೆ ಹೋಗಿವುದು ಉತ್ತಮ.

ಮಳೆ ಜೋರು ಬಂದರೆ ಕೋಟೆ ನಾಡಿನ ಜನರಿಗೆ ಗುಡ್ಡ ಕುಸಿತದ ಭಯ ಶುರುವಾಗಿದೆ. ಚಿತ್ರದುರ್ಗದ ಸುತ್ತಮುತ್ತಲಿನ ಗುಡ್ಡ ಕಡಿದು ಲೇಔಟ್ ಗಳನ್ನಾಗಿ ಮಾಡಲಾಗಿದೆ. ಇದರಿಂದಾಗಿ ನಗರದ ಐಯುಡಿಪಿ ಲೇಔಟ್, ಟೀಚರ್ಸ್ ಕಾಲೋನಿ, ಧವಳಗಿರಿಯ ಬಡಾವಣೆ ಸೇರಿ ಹಲವಡೆ ಗುಡ್ಡ ಕಡಿತ ಉಂಟಾಗಿದೆ. ಅಪಾಯದ ಮಟ್ಟಕ್ಕೆ ಗುಡ್ಡ ಕಡಿಯುತ್ತಿರುವ ಕಾರಣ ಸ್ಥಳೀಯರು ಕಿಡಿಕಾರಿದ್ದಾರೆ. ಮಳೆ ಬರುತ್ತಿರುವ ಕಾರಣ ಮಣ್ಣಿನ ಸವೆತ ಉಂಟಾಗುತ್ತಿದೆ. ಜೋರು ಮಳೆ ಬಂದರೆ ಇನ್ನಷ್ಟು ಅಪಾಯ ಎದುರಾಗಬಹುದೆಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

Advertisement
Tags :
3 ದಿನ ಬಾರೀ ಮಳೆbengaluruchitradurgaShimogasuddionesuddione newsಚಿತ್ರದುರ್ಗಬೆಂಗಳೂರುಶಿವಮೊಗ್ಗಸುದ್ದಿಒನ್ಸುದ್ದಿಒನ್ ನ್ಯೂಸ್ಹಲವು ಭಾಗ
Advertisement
Next Article