Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಧಿಕಾರದ ಆಫರ್ ಕೊಟ್ಟಿದ್ದು ನಿಜ : ಡಿಕೆಶಿ ಭೇಟಿ ರಹಸ್ಯ ಬಿಚ್ಚಿಟ್ಟ ಜಿಟಿ ದೇವೇಗೌಡ

04:21 PM Nov 17, 2023 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸ್ಟಾಟರ್ಜಿ ಬಳಸುತ್ತಿದ್ದಾರೆ. ಅದರಲ್ಲೂ ಆಪರೇಷನ್ ಹಸ್ತ, ಆಪರೇಷನ್ ಕಮಲದ ವಿಚಾರ ಜೋರಾಗಿದೆ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಡಿಕೆ ಶಿವಕುಮಾರ್ ಆಫರ್ ನೀಡಿರುವುದು ಸತ್ಯ ಎಂದು ಜಿಟಿ ದೇವೇಗೌಡ ಒಪ್ಪಿಕೊಂಡಿದ್ದಾರೆ.

Advertisement

ಇತ್ತಿಚೆಗೆ ಜಿ ಟಿ ದೇವೇಗೌಡ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಈ ಭೇಟಿ ಹಿಂದೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಇದೀಗ ಈ ಭೇಟಿ ಬಗ್ಗೆ ಹಾಗೂ ನಡೆದ ಚರ್ಚೆ ಬಗ್ಗೆ ಜಿ ಟಿ ದೇವೇಗೌಡ ಅವರು ಸತ್ಯ ಹೊರ ಹಾಕಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಪಕ್ಷಕ್ಕೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿದ್ದಾರೆ. ಸದಾಶಿವನಗರದ ನನ್ನ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಂದಿದ್ದರು. ಅವರ ಜೊತೆಗೆ ಎಸ್ ಟಿ ಸೋಮಶೇಖರ್ ಸೇರಿದಂತೆ ಬೇರೆ ಬೇರೆ ಶಾಸಕರು ಬಂದಿದ್ದರು ಎಂದಿದ್ದಾರೆ.

ಇದೆ ವೇಳೆ ಅವಕಾಶವಿದೆ, ಕಾಂಗ್ರೆಸ್ ಪಕ್ಷಕ್ಕೆ ಬರುವ ಮನಸ್ಸು ಮಾಡಿ. ನಮ್ಮದೆ ಸರ್ಕಾರವಿದೆ. ನಿಮಗೂ ಅಧಿಕಾರದ ಅವಕಾಶ ಸಿಗಲಿದೆ ಎಂದಿದ್ದರು. ಆದರೆ ನಾನು, ಕೋರ್ ಕಮಿಟಿ ಅಧ್ಯಕ್ಷನಾಗಿ ಜನತಾದಳ ಕಟ್ಟುತ್ತಿದ್ದೇನೆ. ಈಗಾಗಲೇ ನಿಮ್ಮಲ್ಲೇ 135 ಶಾಸಕರಿದ್ದಾರೆ ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ನಿಮಗೆ ಇಲ್ಲ ಎಂದು ಜಿ.ಟಿ.ದೇವೇಗೌಡರು ಹೇಳಿದರು.

Advertisement

ಕಾಂಗ್ರೆಸ್ ಪಕ್ಷ ಸೇರುವ ವಿಚಾರವನ್ನು ನಿನಗೆ ಬಿಟ್ಟಿದ್ದೇನೆ. ನಾನು ಒತ್ತಾಯ ಮಾಡಲ್ಲ. ನಿನ್ನ ಇಷ್ಟ ನೋಡಪ್ಪ ಎಂದು ಹೇಳಿ ಹೋಗಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Advertisement
Tags :
bengaluruDeputy Chief Minister D.K. Shivakumarfeaturedgt dewsuddioneಅಧಿಕಾರಆಫರ್ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಡಿಕೆ ಶಿವಕುಮಾರ್ಭೇಟಿರಹಸ್ಯಶಾಸಕ ಜಿಟಿ ದೇವೇಗೌಡ
Advertisement
Next Article