ಒಂದೇ ಸಮನೆ ಸುರಿಯುತ್ತಿರುವ ಮಳೆ : ಬೆಂಗಳೂರಿನಲ್ಲಿ ಏರಿಕೆಯಾಯ್ತು ಟೊಮೆಟೊ ಬೆಲೆ..!
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮಳೆರಾಯ ಪುರುಸೊತ್ತನ್ನು ಕೊಡದಂತೆ ಸುರಿಯುತ್ತಿದ್ದಾನೆ. ಇದರಿಂದ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಬೆಳೆ ನಷ್ಟದಿಂದಾಗಿ ಬೆಲೆ ಏರಿಕೆಯ ಬಿಸಿಯೂ ಗ್ರಾಹಕರನ್ನು ಬಾಧಿಸುತ್ತಿದೆ. ಈಗಾಗಲೇ ಈರುಳ್ಳಿ ಬೆಲೆ ಏರಿಕೆಯಿಂದಾನೇ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಈಗ ಟೊಮೋಟೋ ಬೆಲೆಯೂ ಏರಿಕೆಯಾಗಿದೆ.
ಸಾಲು ಸಾಲು ಹಬ್ಬಗಳು ಶುರುವಾಗಿವೆ. ಈಗಾಗಲೇ ಟಮೋಟೊ ಬೆಲೆ ಏರಿಕೆಯಲ್ಲಿಯೇ ಇದೆ. ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಇದ್ದವರಿಗೆ ಮತ್ತೆ ಏರಿಕೆಯ ಬಿಸಯನ್ನೇ ನೀಡಿದೆ. ಗ್ರಾಹಕರಿಗೆ ತರಕಾರಿಗಳನ್ನು ಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಬೇಸರ ಮಾಡಿಕೊಂಡೆ ತರಕಾರಿಯನ್ನು ಕೊಂಡುಕೊಂಡು ಮನೆ ಕಡೆಗೆ ನಡೆಯುತ್ತಿದ್ದಾರೆ.
ಮಳೆ ಹೆಚ್ಚಾದ ಕಾರಣ ಮಾರುಕಟ್ಟೆಗೆ ಟೊಮೋಟೊ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಜನರಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಾಗ ಇರುವ ವಸ್ತುಗಳಿಗೆ ಬೆಲೆ ಜಾಸ್ಯಿ ಮಾಡಲಾಗುತ್ತದೆ. ಅದೇ ರೀತಿ ಟೊಮೋಟೋ ಕೂಡ ಬೆಲೆ ಏರಿಕೆ ಮಾಡುತ್ತಲೆ ಇದೆ. ಇಂದು ಬೆಂಗಳೂರು ಮಾರುಕಟ್ಟೆಯಲ್ಲಿಕೆಜಿ ಟೊಮೋಟೊ 50 ರೂಪಾಯಿ ದಾಟಿದೆ. ಈ ಹಿಂದೆ ಮಾರುಕಟ್ಟೆಗೆ 40 ಸಾವಿರ ಬಾಕ್ಸ್ ಟಮೋಟೋ ಬರುತ್ತಿತ್ತು. ಆದರೆ ಈಗ 20 ಬಾಕ್ಸ್ ಟಮೋಟೊ ಬರುತ್ತಿದೆ. ಇದರಿಂದ ಬೆಲೆ ಜಾಸ್ತಿಯಾಗಿದೆ.
ಈ ಮೊದಲೆಲ್ಲಾ ಕೋಲಾರದ ಭಾಗದ ಟಮೋಟೊಗೆ ಬೇಡಿಕೆ ಜಾಸ್ತಿ ಇತ್ತು. ಅಲ್ಲಿನ ರೈತರು ಹೆಚ್ಚಾಗಿ ಟೊಮೋಟೊ ಬೆಳೆಯುತ್ತಿದ್ದರು. ಅದಷ್ಟೇ ಅಲ್ಲದೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಚಳ್ಳಕೆರೆ ಭಾಗದ ರೈತರು ಕೂಡ ಟೊಮೋಟೊ ಬೆಳೆಯುತ್ತಿದ್ದರು. ಮಾತುಕಟ್ಟೆಗೆ ಹೆಚ್ಚಿನ ಟೊಮೋಟೋ ಬರುತ್ತಿತ್ತು. ಆದರೆ ಈಗ ಮಾರುಕಟ್ಟೆಗೇನೆ ಕಡಿಮೆ ಟೊಮೋಟೋ ಬರುತ್ತಿದೆ. ಹಾಗಾಗಿ ಬೆಲೆಯಲ್ಲೂ ಜಾಸ್ತಿಯಾಗಿದೆ.