For the best experience, open
https://m.suddione.com
on your mobile browser.
Advertisement

ಅನಿವಾರ್ಯವಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿದ್ದೀವಿ..ಕನ್ನಡಿಗರ ಹಿತಕ್ಕಾಗಿ ಅಷ್ಟೆ : ಸಿಎಂ ಸಿದ್ದರಾಮಯ್ಯ

12:55 PM Feb 07, 2024 IST | suddionenews
ಅನಿವಾರ್ಯವಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿದ್ದೀವಿ  ಕನ್ನಡಿಗರ ಹಿತಕ್ಕಾಗಿ ಅಷ್ಟೆ   ಸಿಎಂ ಸಿದ್ದರಾಮಯ್ಯ
Advertisement

Advertisement

ನವದೆಹಲಿ: ಬಜೆಟ್ ನಲ್ಲಿ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ರಾಜ್ಯ ಸರ್ಕಾರ, ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯಲ್ಲಿ ರಾಹ್ಯ ಸರ್ಕಾರದ ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ರಾಜ್ಯದ ಹಿತಕ್ಕಾಗಿ ಈ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲರೂ ಇದರಲ್ಲಿ ಭಾಗಿಯಾಗಬೇಕೆಂದು ಬಿಜೆಪಿಯ ಸಂಸದರಿಗೂ ಸಿಎಂ ಸಿದ್ದರಾಮಯ್ಯ ಪತ್ರ ಬರೆಯುವ ಮೂಲಕ, ಮನವಿ ಮಾಡಿದ್ದರು.

Advertisement

ಇದೀಗ ಪ್ರತಿಭಟನೆ ಶುರುವಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಹೋರಾಟ ಯಾರ ವಿರುದ್ಧವೂ ಅಲ್ಲ, ಇದು ಕರುನಾಡು ಹಾಗೂ ಕನ್ನಡಿಗರ ಹಿತಕ್ಕಾಗಿ. ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೇಳೋಣಾ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ.

ಪ್ರತಿಭಟನೆಗೆ ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನಸಭಾ ಸದಸ್ಯರು ಬಂದಿದ್ದಾರೆ. ಬಿಜೆಪಿ ಸಂಸದರಿಗೂ ಆಹ್ವಾನ ನೀಡಿದ್ದೇವೆ. ಅನಿವಾರ್ಯವಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೀವಿ. ರಾಜಕೀಯಕ್ಕೋಸ್ಕರ ಮಾಡುತ್ತಿರುವ ಪ್ರತಿಭಟನೆ ಇದಲ್ಲ. ಇದು ಕರ್ನಾಟಕದ ಹಿತವನ್ನು ಕಾಪಾಡುವುದಕ್ಕೆ ಮಾಡುವುತ್ತಿರುವ ಚಳುವಳಿಯಾಗಿದೆ. ಇದು ಐರಿಹಾಸಿಕ ಚಳುವಳಿಯಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರದಿಂದ ತೆರಿಗೆ ವಿಚಾರದಲ್ಲಿ ಎಷ್ಟೆಲ್ಲಾ ಅನ್ಯಾಯವಾಗುತ್ತಿದೆ ಎಂಬುದನ್ನು ಹಾಗೂ ಎಷ್ಟು ಕೋಟಿ ತೆರಿಗೆ ನಮ್ಮ ರಾಜ್ಯಕ್ಕೆ ಬರಬೇಕಾಗಿತ್ತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು, ಇತ್ತಿಚೆಗಷ್ಟೇ ದಾಖಲೆ‌ ಸಮೇತ ಸತ್ಯಾಂಶ ತೆರೆದಿಟ್ಟಿದ್ದರು. ಇದೀಗ ಈ ಸಂಬಂಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Tags :
Advertisement