ಚಿತ್ರದುರ್ಗ ಸೇರಿದಂತೆ ಹಲವೆಡೆ ಮೂರ್ನಾಲ್ಕು ದಿನ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ..!
ಕಳೆದ ಒಂದು ತಿಂಗಳಿನಿಂದ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸುವುದಕ್ಕೆ ಶುರು ಮಾಡಿದ್ದಾನೆ. ಈ ಸಮಯದಲ್ಲಿ ಬರುತ್ತಿರುವ ಮಳೆ ಕೆಲವು ಭಾಗದ ರೈತರಿಗೆ ಅಗತ್ಯವಾದುದ್ದಾದರೆ ಇನ್ನು ಕೆಲವು ಭಾಗದ ರೈತರನ್ನು ಸಂಕಷ್ಟಕ್ಕೆ ದೂರಿದೆ. ಈಗ ಜಮೀನುಗಳಿಗೆ ಬೀಜ ಬಿತ್ತನೆ ಮಾಡಿರುವವರಿಗೆ ಮಳೆಯ ಅಗತ್ಯವಿತ್ತು. ಆದರೆ ಚಿಕ್ಕಮಗಳೂರು ಭಾಗದಲ್ಲಿ ರೈತರ ಕಾಫಿ ತೋಟಗಳಲ್ಲಿ ಕಾಫಿ ಹಣ್ಣಿಗೆ ಬಂದಿದೆ. ನಿನ್ನೆಯಿಂದಾನೂ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಇನ್ನೆಲ್ಲಿ ಹಣ್ಣಾಗಿರುವ ಕಾಫಿ ನೆಲ ಕಚ್ಚುತ್ತದೋ ಎಂಬ ಭೀತಿ ಎದುರಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರೆದ ಪರಿಣಾಮ ಕೆಲ ಕಡೆ ಸೇತುವೆ ಜಪಾವೃತಗೊಂಡಿವೆ. ಹಿನ್ನೆಲೆ ಕಳಸ-ಬಾಳೆ ಹೊನ್ನೂರು ರಾಜ್ಯ ಹೆದ್ದಾರಿ ಬಂದ್ ಆಗಿದೆ. ಮೂಡಿಗೆರೆ ಭಾಗದಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮಳೆಯ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.
ಇನ್ನು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಜೋರು ಮಳೆಯಾಗಲಿದೆ. ಈ ಸಂಬಂಧ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ಉಡುಪಿ, ಗದಗ, ಹಾವೇರಿ ಭಾಗದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಆದರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಒಂದು ವಾರಗಳ ಕಾಲ ಹಗುರವಾದ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಹೊರಗೆ ಹೋಗುವವರು ಎಚ್ಚರದಿಂದ ಇರಬೇಕಾಗಿದೆ.