For the best experience, open
https://m.suddione.com
on your mobile browser.
Advertisement

ನನ್ನನ್ನ ಗಟ್ಟಿಗಿತ್ತಿ ಅಂತಿದ್ರು.. ಬಹಳ ನೋವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಫಸ್ಟ್ ರಿಯಾಕ್ಷನ್..!

09:36 PM Dec 19, 2024 IST | suddionenews
ನನ್ನನ್ನ ಗಟ್ಟಿಗಿತ್ತಿ ಅಂತಿದ್ರು   ಬಹಳ ನೋವಾಗಿದೆ  ಲಕ್ಷ್ಮೀ ಹೆಬ್ಬಾಳ್ಕರ್ ಫಸ್ಟ್ ರಿಯಾಕ್ಷನ್
Advertisement

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದಗಳನ್ನ ಬಳಸಿದ್ದಾರೆ ಎಂಬ ಆರೋಪದ ಮೇಲೆ ಸದ್ಯಕ್ಕೆ ಬೆಳಗಾವಿ ಪೊಲೀಸರು ಸಿಟಿ ರವಿ ಅವರನ್ನ ಬಂಧಿಸಿದ್ದಾರೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ನನ್ನನ್ನ ಗಟ್ಟಿಗಿತ್ತಿ ಎನ್ನುತ್ತಿದ್ದರು. ಆದರೆ ಈ ಮಾತು ತುಂಬಾ ನೋವು ಕೊಟ್ಟಿದೆ ಎಂದಿದ್ದಾರೆ.

Advertisement

'ನಿಜವಾಗಲೂ ಬಹಳ ನೋವಾಗಿದೆ‌. ಬಹಳ ಗಟ್ಟಿಗಿತ್ತಿ ಎನ್ನುತ್ತಿದ್ದರು. ಕಿತ್ತೂರು ರಾಣಿ ಚನ್ನಮ್ಮರಿಗೆ ಹೋಲಿಕೆ ಮಾಡಿದ್ದರು. ಆದರೆ ಇವತ್ತು ನನಗೆ ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೆಟ್ಟ ಪದ ಬಳಸಿದ್ದ ಸಿಟಿ ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿಯೇ ಕ್ಲಾಸ್ ತೆಗೆದುಕೊಂಡರು. ನಿನಗೆ ತಾಯಿ ಇಲ್ವಾ..? ಹೆಂಡತಿ‌ ಇಲ್ವಾ..? ಎಂದು ಏಕ ವಚನದಲ್ಲಿಯೇ ಆಕ್ರೋಶ ಹೊರ ಹಾಕಿದರು. ಈ ಸಂಬಂಧ ಪೊಲೀಸರಿಗೂ ದೂರನ್ನು ನೀಡಿದರು. ಹೀಗಾಗಿ ಪೊಲೀಸರು ಸಿಟಿ ರವಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ನಾನು ಆ ಪದ ಬಳಕೆ ಮಾಡಿಲ್ಲ ಎಂದೇ ಸಿಟಿ ರವಿ ವಾದ ಮಾಡಿದರು. ಅಧಿವೇಶನದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿಟ್ಯೂಟ್ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆಯನ್ನು ಎಲ್ಲರೂ ಖಂಡಿಸಿದ್ದಾರೆ. ಇದೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸದನದೊಳಗೆ ನುಗ್ಗಿ ಸಿಟಿ ರವಿ ಮೇಲೆ ಹಲ್ಲೆ ನಡೆಯುವ ಯತ್ನ ಮಾಡಿದರು. ತಕ್ಷಣ ಪೊಲೀಸರೆಲ್ಲಾ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಬಳಿಕ ಬೆಳಗಾವಿ ಸುವರ್ಣ ಸೌಧಕ್ಕೆ ಭದ್ರತೆಯನ್ನು ಹೆಚ್ಚು ಮಾಡಿದರು.

Advertisement

Tags :
Advertisement