For the best experience, open
https://m.suddione.com
on your mobile browser.
Advertisement

ಗ್ಯಾರಂಟಿಯನ್ನೇನೋ ರದ್ದು ಮಾಡ್ತೀರಂತೆ ಪೇಪರ್ ನಲ್ಲಿ ಬಂದಿತ್ತು : ಸಿದ್ದು, ಡಿಕೆಶಿಯನ್ನು ಕೇಳಿದ ಖರ್ಗೆ

04:58 PM Oct 31, 2024 IST | suddionenews
ಗ್ಯಾರಂಟಿಯನ್ನೇನೋ ರದ್ದು ಮಾಡ್ತೀರಂತೆ ಪೇಪರ್ ನಲ್ಲಿ ಬಂದಿತ್ತು   ಸಿದ್ದು  ಡಿಕೆಶಿಯನ್ನು ಕೇಳಿದ ಖರ್ಗೆ
Advertisement

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಯಶಸ್ವಿ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಯನ್ನು ನಿಲ್ಲಿಸುತ್ತಾರೆ ಎಂಬ ಮಾತು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮಾತನಾಡಿದ್ದಾರೆ.

Advertisement

Advertisement

'ಐದು ಗ್ಯಾರಂಟಿ ಕೊಟ್ಟಿದ್ದೀರಾ ನಿಮ್ಮನ್ನ ನೋಡಿ ನಾನು ಅಲ್ಲಿ ಮಹಾರಾಷ್ಟ್ರದಲ್ಲಿ ಐದು ಗ್ಯಾರಂಟಿ ಹೇಳಿದ್ದೀನಿ. ಒಂದು ಗ್ಯಾರಂಟಿ ಕೈಬಿಡ್ತೀನಿ ಅಂತ ಹೇಳ್ತೀರಿ ಎಂದಾಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೈ ಬಿಡ್ತೀವಿ ಅಂತ ಹೇಳಿಲ್ಲ ಎಂದಿದ್ದಾರೆ. ಆಗ ಮಲ್ಲಿಕಾರ್ಜುನ ಖರ್ಗೆ ಅವರು ನೀವೂ ಪೇಪರ್ ಓದುತ್ತಿಲ್ಲ. ನಾನು ಪೇಪರ್ ನಲ್ಲಿ ಬಂದಿದ್ದಷ್ಟೇ ನೋಡ್ತೀನಿ. ಪೇಪರ್ ನಲ್ಲಿ ಬಂದಿದೆ. ಪರಿಷ್ಕರಣೆ ಮಾಡ್ತೀವಿ ಅಂತೇಳಿ ಡೌಟ್ ಕ್ರಿಯೇಟ್ ಮಾಡಿದ್ರಿ. ಇದರ ಬಗ್ಗೆ ಮಾತಾಡುವವರಿಗೆ ಇದು ಒಳ್ಳೆದಾಯ್ತು.

Advertisement

ಏನನ್ನೆ ಹೇಳಿ ಕ್ಲಿಯರ್ ಇರಲಿ. ಯಾಕಂದ್ರೆ ನಾವೂ ನಿಮ್ಮನ್ನ ಅನುಕರಣೆ ಮಾಡಿ, ಮಹಾರಾಷ್ಟ್ರದಲ್ಲಿ ಹೇಳಿದ್ದೀವಿ. ಐದು, ಆರು, ಹತ್ತು ಇಪ್ಪತ್ತು ಹೇಳುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಏನು ಬಜೆಟ್ ಇದೆ, ಆ ಬಜೆಟ್ ತಕ್ಕಂತೆ ಗ್ಯಾರಂಟಿಗಳನ್ನ ಕೊಡಿ. ಬಜೆಟ್ ಬಿಟ್ಟು ಗ್ಯಾರಂಟಿಗಳನ್ನ ಕೊಟ್ರೆ ದಿವಾಳಿ ಎದ್ದೋಗುತ್ತೆ. ಎಲ್ಲರು ನಿಮ್ಮ ಮೇಲೆ ಬೀಳ್ತಾರೆ. ಈ ಸರ್ಕಾ ಫೇಲ್ ಆದ್ರೆ ಮು.ಮದಿನ ಜನರೇಷನ್ ಗೆ ಏನು ಇಟ್ಟೋಗಲ್ಲ. ಮತ್ತೆ ಹತ್ತು ವರ್ಷ ಅವರು ವನವಾಸದಲ್ಲಿರಬೇಕಾಗುತ್ತೆ. ಅದಕ್ಕಾಗಿ ದಯವಿಟ್ಟು ಬಜೆಟ್ ನೋಡಿ ಮಾಡಬೇಕು. ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ವಿಚಾರಕ್ಕೆ ಅದನ್ನೇ ಹೇಳಿದ್ದಾರೆ' ಎಂದು ಕರ್ನಾಟಕಕ್ಕೂ ಉದಾಹರಣೆ ಕೊಟ್ಟಿದ್ದಾರೆ.

Advertisement

Advertisement
Tags :
Advertisement