ದರ್ಶನ್ ಕೇಸಲ್ಲಿ ಸಚಿವರ ಒತ್ತಡ ಇದೆಯಾ..? : ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಹೇಳಿದ್ದೇನು..?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆದಾಗಿನಿಂದ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ವರದಿಯನ್ನು ತಪ್ಪಾಗಿ ಕೊಡುವಂತೆ ಒತ್ತಾಯ ಹೇರುತ್ತಿದ್ದಾರೆ, ದರ್ಶನ್ ಅವರನ್ನು ತಪ್ಪಿತಸ್ಥ ಸ್ಥಾನದಿಂದ ಹೊರಗೆ ಇರಿಸಲು ಸಚಿವರಿಂದಾನೇ ಗೃಹ ಸಚಿವರಿಗೆ ಬೇಡಿಕೆ ಇದೆ. ಹೀಗೆ ನಾನಾ ರೀತಿಯಾದಂತ ಪ್ರಶ್ನೆಗಳು ಓಡಾಡುತ್ತಿವೆ. ಇದೀಗ ಹೊಸದಾಗಿ ಈ ಪ್ರಕರಣದಲ್ಲಿ ವಿಶೇಷ ಅಭಿಯೋಜಕರನ್ನು ಬದಲಾವಣೆ ಮಾಡಲಾಗುತ್ತಿದೆ ಎಂಬ ವಿಚಾರ ಹರಿದಾಡುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಎಸ್.ಪಿ.ಪಿ ಬದಲಾವಣೆಯ ಪ್ರಸ್ತಾಪವೇ ಇಲ್ಲ. ಈ ಕೇಸನ್ನು ನೋಡಿಕೊಳ್ಳುತ್ತಿರುವ ವಿಶೇಷ ಅಭಿಯೋಜಕರು ಪ್ರಸನ್ನ ಕುಮಾರ್ ಅವರಿದ್ದಾರೆ. ಆದರೆ ಪ್ರಸನ್ನ ಕುಮಾರ್ ಅವರನ್ನು ಬದಲಾವಣೆ ಮಾಡಿ ಎಂದು ಯಾರೂ ಕೂಡ ನನ್ನ ಬಳಿ ಕೇಳಿಲ್ಲ. ಈ ಸಂಬಂಧ ಭೇಟಿಯನ್ನು ಮಾಡಿಲ್ಲ, ಒತ್ತಡವನ್ನೂ ಹಾಕಿಲ್ಲ. ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಅವಕಾಶವನ್ನು ಕೊಡಲಾಗಿದೆ. ಒಂದು ವೇಳೆ ಯಾರಾದರೂ ಒತ್ತಡ ಹಾಕಿದರೂನು ಈ ಬಗ್ಗೆ ನಾವೂ ಕೇಳಲ್ಲ ಎಂದಿದ್ದಾರೆ.
ಇನ್ನು ಸಚುವರು ಒತ್ತಡ ಹಾಕುತ್ತಿದ್ದಾರೆ ಎಂಬುದೆಲ್ಲ ಸತ್ಯವಲ್ಲ. ವಿರೋಧ ಪಕ್ಷದವರು ಹೇಳುವುದೆಲ್ಲಾ ನಿಜವಾಗಿರುತ್ತದಾ..? ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಇದೆಲ್ಲಾ ಹೇಳೋದೆಲ್ಲಾ ಸುಳ್ಳು ಎಂದು ಹರಿದಾಡುತ್ತಿದ್ದ ಗಾಸಿಪ್ ಸ್ಟೋರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಇಂದು ಬೆಳಗ್ಗೆಯೇ ಅನಾರೋಗ್ಯಕ್ಕೆ ಈಡಾಗಿದ್ದರು. ಪೊಲೀಸರು, ಠಾಣೆಗೆ ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸರಿಯಾಗಿ ಊಟ, ತಿಂಡಿ, ನಿದ್ದೆ ಮಾಡದ ಕಾರಣ ಪವಿತ್ರಾಗೆ ಲೋ ಬಿಪಿ ಸಮಸ್ಯೆ ಕಾಡಿತ್ತು.