For the best experience, open
https://m.suddione.com
on your mobile browser.
Advertisement

ಕೇಂದ್ರ ಸರ್ಕಾರದಿಂದ ಹಣ ತರು ಧಮ್ ಇದೆಯಾ..? : ಸಚಿವ ಮಧು ಬಂಗಾರಪ್ಪ ಪ್ರಶ್ನೆ

06:07 PM Nov 27, 2023 IST | suddionenews
ಕೇಂದ್ರ ಸರ್ಕಾರದಿಂದ ಹಣ ತರು ಧಮ್ ಇದೆಯಾ      ಸಚಿವ ಮಧು ಬಂಗಾರಪ್ಪ ಪ್ರಶ್ನೆ
Advertisement

ಶಿವಮೊಗ್ಗ: ರಾಜ್ಯಾದ್ಯಂತ ಬೆಳೆದ ಬೆಳೆ ನಾಶವಾಗಿ, ಬರಗಾಲದ ಛಾಯೆ ಮೂಡಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಒಂದು ಪೈಸೆಯನ್ನು ಪರಿಹಾರ ನೀಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದೀಗ ಸಚಿವ ಮಧು ಬಂಗರಪ್ಪ ಪರಿಹಾರದ ವಿಚಾರಕ್ಕೆ ಸವಾಲು ಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ತರುವ ಧಮ್, ತಾಕತ್ ಯಾರಿಗೆ ಇದೆ ಎಂದು ಬಿಜೆಪಿ ಸಂಸದರಿಗೆ ಪ್ರಶ್ನೆ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೇಂದ್ರ ಸರ್ಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲ. ನಮ್ಮ ರಾಜ್ಯದ ಸಚಿವರು ದೆಹಲಿಗೆ ಹೋದರೂ, ಅಧಿಕಾರಿಗಳನ್ನು ಮಾತನಾಡಿಸಲು ಆಗಲ್ಲ. ಈಗಾಗಲೇ ಬರಗಾಲದ ನಿರ್ವಹಣೆಯನ್ನು ಮಾಡಲು ಸರ್ಕಾರ ಕ್ರಮವಹಿಸಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಒಂದು ತಿಂಗಳ ಬಳಿಕ ತೊಂದರೆಯಾಗಬಹುದು. ಅದು ನೀರಿಗೆ ಸಮಸ್ಯೆಯಾಗಬಹುದು. ಮೇವಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

Advertisement

ಖಜಾನೆಯಲ್ಲಿ ದುಡ್ಡಿಲ್ಲ, ರಾಜ್ಯದಲ್ಲಿ ವಿದ್ಯುತ್ ಇಲ್ಲ ಅಂತ ಬಿಜೆಪಿಯವರು ಅಪಪ್ರಚಾರ ಮಾಡಿದರು. ಅಂತಹ ಸಮಸ್ಯೆ ಎಲ್ಲಾ ಏನು ಇಲ್ಲ. ಖಜಾನೆಯಲ್ಲಿ ಹಣವೂ ಇದೆ, ರೈತರಿಗೆ ನೀಡಲು ವಿದ್ಯುತ್ ಕೂಡ ಇದೆ. ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದೇವೆ‌. ಮುಂದೆ ನಿರಂತರವಾಗಿ ನೀಡುತ್ತೇವೆ. ನಗರದಲ್ಲೂ ಲೋಡ್ ಶೆಡ್ಡಿಂಗ್ ಎಲ್ಲೂ ಮಾಡ್ತಿಲ್ಲ. ಕಳೆದ ತಿಂಗಳಿನಿಂದ ವಿದ್ಯುತ್ ಬಳಕೆ ಶೇಕಡ 90 ರಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಇದೇ ವೇಳೆ ಸೊರಬ ಪಟ್ಟಣಕ್ಕೆ ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ 238 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Tags :
Advertisement