Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಹಿಷಾ ಮಂಡೋಲೋತ್ಸವಕ್ಕೆ ಸರ್ಕಾರ ಅನುಮತಿ ನೀಡುತ್ತಾ..? ಸಚಿವ ಮಹದೇವಪ್ಪ ಹೇಳಿದ್ದೇನು..?

02:06 PM Sep 28, 2024 IST | suddionenews
Advertisement

 

Advertisement

ಮೈಸೂರು: ದಸರಾ ಸಂಭ್ರಮ ಶುರುವಾದಾಗ ಮಹಿಷಾ ಮಂಡಲೋತ್ಸವದ ವಿಚಾರ ಚರ್ಚೆಗೆ ಬರುತ್ತದೆ. ಇದೀಗ ಮಹಿಷಾ ಮಂಡೋಲೋತ್ಸವದ ಬಗ್ಗೆ ಸಚಿವ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇದು ಜನರ ದಸರಾ ಆಗಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಎಲ್ಲರವೂ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಮಹಿಳಾ ಮಂಡಲೋತ್ಸವ ಆಚರಣೆಗೆ ಸರ್ಕಾರ ಅನುಮತಿ ಕೊಟ್ಟಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪ್ರಿಯಾಂಬಲ್ ಓದಬೇಕು ಎಂದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ನೀವೂ ಪ್ರಿಯಾಂಬಲ್ ಓದಿದರೆ ಅರ್ಥವಾಗುತ್ತದೆ. ಸಿಂಧು ನದಿ ನಾಗರೀಜತೆ ಬರುವುದಕ್ಕೂ ಮೊದಲೇ ಅಲ್ಲೆಲ್ಲಾ ಭಾರತದ ಮೂಲ ನಿವಾಸಿಗಳು ವಾಸ ಮಾಡುತ್ತಿದ್ದರು. ಅವರು ಕಲ್ಲು, ಮರ, ಗಾಳಿ, ನೀರು, ಪ್ರಕೃತಿ ಇದನ್ನೇ ಪೂಜೆ ಮಾಡ್ತಾ ಇದ್ರು, ಇದನ್ನೇ ಆರಾಧಿಸುತ್ತಿದ್ದರು. ಅದು ಸರಿಯೇ. ಆದರೆ ಅವರು ಮಾಡಿ ಅಂತಾನೂ ಹೇಳಲ್ಲ,‌ಮಾಡಬೇಡಿ ಅಂತಾನು ಹೇಳಲ್ಲ. ಅದನ್ನ ನಾವೇಗೆ ಹೇಳುವುದಕ್ಕೆ ಆಗುತ್ತೆ. ಸಂವಿಧಾನದಲ್ಲಿಯೇ ಎಲ್ಲರಿಗೂ ಹಕ್ಕಿದೆ. ಲಾ ಅಂಡ್ ಆರ್ಡರ್ ಆಗಬಾರದು. ಬೇರೆಯವರಿಗೆ ತೊಂದರೆಯಾಗಬಾರದು. ಧಾರ್ಮಿಕ ಆಚಾರ ವಿಚಾರಗಳನ್ನು ಮಾಡುವುದಕ್ಕೆ ಅವರಿಗೆ ಮುಕ್ತವಿದೆ. ಉಪಾಸನೆ ಸ್ವಾತಂತ್ರ್ಯ ಇದೆಯಲ್ಲ. ಆ ನೆಪದಲ್ಲಿ ಸಾರ್ವಜನಿಕರಿಗೆ, ಕಾನೂನಿಗೆ ಭಂಗವಾದರೆ ಕಾನೂನು ಸುಮ್ಮನೆ ಇರಲ್ಲ.

Advertisement

ಚಾಮುಂಡಿ‌ ಬೆಟ್ಟಕ್ಕೋಗಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿದರೆ ಅಂದೇ ಚಾಮುಂಡಿ ಚಲೋ ಮಾಡ್ತೇವೆ ಎಂದು ಹೇಳಿರುವ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಸಚುವ ಮಹದೇವಪ್ಪ ಅವರು, ಯಾರದ್ದೇ ಆಗಲಿ ಮೂಲಭೂತ ಹಕ್ಕನ್ನು ಕೊಡುವುದಿಲ್ಲ ಅಂತ ನಿರಾಕರಣೆ ಮಾಡುವುದಕ್ಕೆ ಅವರಿಗೆ ಯಾವ ಹಕ್ಕು ಕೊಟ್ಟಿದ್ದಾರೆ ಸಂವಿಧಾನದಲ್ಲಿ. ಅಥವಾ ನನಗೆ ಯಾವ ಹಕ್ಕು ಕೊಟ್ಟಿದ್ದಾರೆ. ಹಕ್ಕುಗಳು ಎಲ್ಲರಿಗೂ ಸಮಾನವಾಗಿವೆ. ಹೀಗಾಗಿ ಯಾರನ್ನು ಪ್ರಶ್ನೆ ಮಾಡುವಂತೆ ಇಲ್ಲ ಎಂದಿದ್ದಾರೆ.

Advertisement
Tags :
bengaluruchitradurgaGovernmentMahisha MandolotsavaMinister Mahadevappapermissionsuddionesuddione newsಚಿತ್ರದುರ್ಗಬೆಂಗಳೂರುಮಹಿಷಾ ಮಂಡೋಲೋತ್ಸವಸಚಿವ ಮಹದೇವಪ್ಪಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article