ಮಂಡ್ಯ ಲೋಕಸಭಾ ಚುನಾವಣೆ ಜೆಡಿಎಸ್ ಗಾ ಸುಮಲತಾಗಾ..? : ಆರ್ ಅಶೋಕ್ ಕೊಟ್ಟ ಸುಳಿವೇನು..?
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕಣದ ಬಿಸಿ ಜಾಸ್ತಿಯಾಗುತ್ತಲೆ ಇದೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆಯೇ ಜಾಸ್ತಿಯಾಗಿತ್ತು. ಇತ್ತ ಸುಮಲತಾ ಕೂಡ ಮಂಡ್ಯ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಜೆಡಿಎಸ್ ಅಂತು ಮಂಡ್ಯ ಬಿಟ್ಟುಕೊಡುವ ಮಾತೆ ಇಲ್ಲ. ಇದೀಗ ಈ ಲೆಕ್ಕಾಚಾರದ ನಡುವೆ ಮಂಡ್ಯ ಟಿಕೆಟ್ ಯಾರ ಪಾಲಾಗಲಿದೆ ಎಂಬುದರ ಬಗ್ಗೆ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯನ್ನೇ ನಿಲ್ಲಿಸುವ ಸೂಚನೆ ನೀಡಿದ್ದಾರೆ. ಇದೆ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ಅಧಿವೇಶನಕ್ಕೂ ಮುನ್ನ ಬಿಜೆಪಿ ಬರ ಅಧ್ಯಯನ ನಡೆಸಿತ್ತು. ನಾಳೆ ಕೋಲಾರದಲ್ಲಿ ರೈತರ ಪರ ನಾವೂ ಹೋರಾಟ ಮಾಡುತ್ತಿದ್ದೇವೆ. ಕೋಲಾರದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ. ಜನವರಿ 30ರಂದು ದೊಡ್ಡಬಳ್ಳಾಪುರದಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಇನ್ನು ಅಧಿವೇಶನ ಮುಗಿದ ಮೇಲೆ ಮೂರು ತಾಸು ವಿದ್ಯಿತ್ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಆ ಕೆಲಸ ಆಗಿಲ್ಲ. ಇದು ಉಡಾಫೆಯ ಸರ್ಕಾರವಾಗಿದೆ. ರೈತರಿಗೆ ಕೊಡುವುದಕ್ಕೆ ಮಾತ್ರ ಹಣವಿಲ್ಲ. ಆದರೆ ಸಲಹೆಗಾರರನ್ನು ನೇಮಿಸಿಕೊಂಡು ಹಣವನ್ನು ದುಂದುವೆಚ್ಚ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಹೋಪ್ ಲೆಸ್ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.