ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಮಹಾರಾಷ್ಟ್ರ ಸಿಎಂ ಸಹಾಯ ತೆಗೆದುಕೊಳ್ಳುತ್ತಿದ್ದಾರಾ..? ಏನಾಗ್ತಿದೆ ರಾಜ್ಯರಾಜಕಾರಣದಲ್ಲಿ..?
ಬೆಳಗಾವಿ: ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆಲ್ಲಿವ ಮೂಲಕ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಆದರೆ ಅಂದಿನಿಂದಾನು ಬಿಜೆಪಿ ಹಾಗೂ ಜೆಡಿಎಸ್ ನಾಯಕರದ್ದು ಒಂದೇ ವಾಕ್ಯ. ಈ ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ಬೀಳಲಿದೆ ಎಂದು. ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಕೂಡ ಹೇಳಿಕೆ ನೀಡಿದ್ದಾರೆ. 'ನಾಥ' ಆಪರೇಷನ್ ಗೆ ರೆಡಿಯಾಗಿದ್ದಾರಂತೆ.
ಮಹಾರಾಷ್ಟ್ರದ ಸತಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಏಕನಾಥ ಶಿಂಧೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. 'ನಾನು ಇತ್ತಿಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಅಲ್ಲಿ 'ನಾಥ' ಆಪರೇಷನ್ ಮಾಡೋದಿದೆ ಎಂದಿದ್ದರು. ನಾನು ಕೇಳಿದೆ ನಾಥ ಆಪರೇಷನ್ ಅಂದ್ರೆ ಏನು ಅಂತ. ಆಗ ಏಕನಾಥ ಶಿಂಧೆ ಮಾಡಿದ ಆಪರೇಷನ್ ಎಂದು ಹೇಳಿದರು. ನಿಮ್ಮ ಅನುಭವ ನಮಗೆ ಬಗಳ ಮುಖ್ಯ. ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕಕ್ಕೆ ಬರಬೇಕಾಗುತ್ತದೆ. ನಿಮ್ಮ ಅನುಭವ ನಮಗೆ ಕೆಲಸಕ್ಕೆ ಬರುತ್ತದೆ ಎಂದರು. ಅದಕ್ಕೆ ಆಯ್ತು ನಾನು ಬರುತ್ತೇನೆ ಎಂದು ಒಪ್ಪಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಕಾಂಗ್ರೆಸ್ ಮತ್ತು ಎನ್ಸಿಪಿ ನೇತೃತ್ವದ ಮಹಾಘಟಬಂಧನವನ್ನು ಬೀಳಿಸಿದ್ದರು. ಹೀಗಾಗಿ ಅವರದ್ದೇ ಅನುಭವವನ್ನು ಇಲ್ಲಿಯೂ ಅಪ್ಲೈ ಮಾಡಲು ವಿರೋಧ ಪಕ್ಷ ಪ್ಲ್ಯಾನ್ ಮಾಡುತ್ತಿದೆ. ಶಿಂಧೆ ಅವರೇ ಈ ರೀತಿಯ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದ್ರೆ ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿರುವುದು ತಿಳಿದಂತಾಗಿದೆ. ಇತ್ತಿಚೆಗೆ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ಮುಗಿದ ಮೇಲೆ ಏನಾಗುತ್ತೆ ನೋಡಿ ಎಂದಿದ್ದರು.