Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಮಿತ್ ಶಾ ಕರೆಯಿಂದ ಬದಲಾಯಿತಾ ಈಶ್ವರಪ್ಪ ಮನಸ್ಸು ..? ಶಿವಮೊಗ್ಗ ಅಖಾಡದಿಂದ ಹಿಂದಕ್ಕೆ..!

01:03 PM Apr 02, 2024 IST | suddionenews
Advertisement

 

Advertisement

ಶಿವಮೊಗ್ಗ: ಹಾವೇರಿ ಕ್ಷೇತ್ರದಿಂದ ತನ್ನ ಮಗನಿಗೆ ಟಿಕೆಟ್ ಬೇಕೆಂದು‌ ಮೊದಲೇ ಡಿಮ್ಯಾಂಡ್ ಇಟ್ಟಿದ್ದರು ಕೆ ಎಸ್ ಈಶ್ವರಪ್ಪ. ಆದರೆ ಬಿಜೆಪಿ ಹೈಕಮಾಂಡ್ ಹಾವೇರಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಣೆ ಹಾಕಿದೆ. ಇದಕ್ಕೆ ಕೋಪಗೊಂಡಿದ್ದ ಈಶ್ವರಪ್ಪ ಬಂಡಾಯ ಸಾರಿದ್ದರು. ಶಿವಮೊಗ್ಗದಲ್ಲಿಯೇ ಮಗನನ್ನು ನಿಲ್ಲಿಸುತ್ತೇನೆ ಎಂದಿದ್ದರು. ಇದೀಗ ಅವರ ಕೋಪ ಶಮನವಾಗಿದ್ದು, ಬಿಎಸ್ವೈ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸುವ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈಶ್ವರಪ್ಪ ಅವರ ಕೋಪವನ್ನು ತಣಿಸಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಅವರು ನಿಮ್ನೆ ರಾತ್ರಿಯೇ ರಾಜ್ಯಕ್ಕೆ ಆಗಮಿಸಿದ್ದು, ಎಲ್ಲಾ ಲೋಕಸಭಾ ಕ್ಷೇತ್ರಗಳ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಇದೇ ವೇಳೆ ಈಶ್ವರಪ್ಪ ಅವರಿಗೂ ಕರೆ ಮಾಡಿ, ಹತ್ತು ನಿಮಿಷಗಳ ಕಾಲ ಮಾತನಾಡಿದ್ದಾರೆ. ಈಶ್ವರಪ್ಪ ಅವರ ಮನವೊಲಿಸುವಂತ ಭರವಸೆಗಳನ್ನು ನೀಡಿದ್ದಾರೆ. ಈ ಭರವಸೆಗಳನ್ನು ರಿಸೀವ್ ಮಾಡಿಕೊಂಡಿರುವ ಈಶ್ವರಪ್ಪ ಅವರು ಬಂಡಾಯದ ಬಾವುಟ ಹಾರಿಸದೆ, ಬಿವೈ ರಾಘವೇಂದ್ರ ಅವರಿಗೆ ಬೆಂಬಲ ನೀಡುತ್ತಾರೆ ಎನ್ನಲಾಗಿದೆ.

Advertisement

ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಈ ಸಂಬಂಧ ಮಾಹಿತಿ ನೀಡಲಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಸ್ವತಂತ್ರ ಸ್ಪರ್ಧೆ ಮಾಡುತ್ತಾರಾ ಅಥವಾ ಬೆಂಬಲ ನೀಡುತ್ತಾರಾ ನೋಡಬೇಕಿದೆ. ಯಾಕಂದ್ರೆ ಅಮಿತ್ ಶಾ ಅವರು ಕರೆ ಮಾಡಿದ್ದಾರೆ‌ ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾನೇ ಈಶ್ವರಪ್ಪ ಅವರು ಹೇಳಿದ್ದಾರೆ. ಹೀಗಾಗಿ ಸುದ್ದಿಗೋಷ್ಟಿಯ ನಂತರ ವಿಚಾರ ತಿಳಿಯಲಿದೆ.

Advertisement
Tags :
Amit ShahbengaluruchitradurgaeshwarappaShimogasuddionesuddione newsಅಖಾಡಅಮಿತ್ ಶಾಕೆ ಎಸ್ ಈಶ್ವರಪ್ಪಚಿತ್ರದುರ್ಗಬೆಂಗಳೂರುಶಿವಮೊಗ್ಗಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article