ಕೇಂದ್ರದ ಪ್ರೀ ಬಜೆಟ್ ನಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ..!
ಲೋಕಸಭಾ ಚುನಾವಣೆ ಮುಗಿದಿದೆ. ಕೇಂದ್ರ ಸರ್ಕಾರದ ಸಂಪುಟ ರಚನೆಯಾಗಿದೆ. ಮುಂದಿನ ತಿಂಗಳು ಜುಲೈನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಮೋದಿ ಸರ್ಕಾರದ 3.0 ಮೊದಲ ಬಜೆಟ್ ಇದಾಗಿರಲಿದೆ. ಮೂರನೇ ಬಾರಿಗೂ ಜನ ಮೋದಿಯವರನ್ನೇ ಆಯ್ಕೆ ಮಾಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಪ್ರೀ ಬಜೆಟ್ ಸಭೆಯನ್ನು ನಡೆಸಲಾಗುತ್ತದೆ. ಈ ಸಭೆಗೆ ಕರ್ನಾಟಕದ ಸಿಎಮನ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಈ ಬಜೆಟ್ ಮಂಡನೆ ಮಾಡಲಿದ್ದಾರೆ. ಜೂನ್ 22ಕ್ಕೆ ಪ್ರೀ ಬಜೆಟ್ ಸಭೆ ನಿಗಧಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೂ ನಿರ್ಮಲಾ ಸೀತರಾಮನ್ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಸಹ ನೀಡಿದ್ದಾರೆ. 'ಜೂನ್ 22ಕ್ಕೆ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗಧಿಯಾಗಿದೆ. ಈ ಕಾರಣದಿಂದ ಪ್ರೀ ಬಜೆಟ್ ಸಭೆಗೆ ಹಾಜರಾಗುವುದಕ್ಕೆ ಸಾಧ್ಯವಿಲ್ಲ. ಆದರೆ ನನ್ನ ಸಂಪುಟದಿಂದ ಸಚಿವ ಕೃಷ್ಣಭೈರೇಗೌಡ ಅವರು ಭಾಗಿಯಾಗುತ್ತಾರೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಈ ಪೂರ್ವ ನಿಯೋಜಿತ ಸಭೆಯಲ್ಲಿ ಸಾಕಷ್ಟು ಸಂಸ್ಥೆಗಳು ಸಹ ಭಾಗಿಯಾಗಲಿದೆ. ಗುರುವಾರ ಸಂಜೆ 4ರಿಂದ 6ರ ತನಕ ದೆಹಲಿ ನಾರ್ತ್ ಬ್ಲಾಕ್ ನಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಭಾರತೀಯ ವಾಣಿಜ್ಯ ಮತಚತು ಉದ್ಯಮಗಳ ಒಕ್ಕೂಟ, ಭಾರತೀಯ ಕೈಗಾರಿಕ ಒಕ್ಕೂಟ, ಇಂಡಸ್ಟ್ರಿಸ್ ಆಫ್ ಇಂಡಿಯಾ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಜೆಟ್ ಮಂಡನೆ ಜನಸಾಮಾನ್ಯರು, ರೈತರಿಗೆ ಅನುಕೂಲವಾಗುವಂತೆ ಇರಲಿದೆ ಎಂಬ ನಂಬಿಕೆ ಜನರಲ್ಲಿದೆ.