For the best experience, open
https://m.suddione.com
on your mobile browser.
Advertisement

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

03:21 PM May 03, 2024 IST | suddionenews
ಕಾಲು ಕಟ್ಟಿ  ಅತ್ಯಾಚಾರ   ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ   ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ
Advertisement

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಮಹಿಲಕೆಯನ್ನು ಕಿಡ್ನ್ಯಾಪ್ ಮಾಡಿರುವ ಕೇಸ್.

Advertisement

ಕೆ ಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯ ಮಗ ತನ್ನ ತಾಯಿ ಕಾಣೆಯಾಗಿದ್ದಾರೆಂದು ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಬಳಿಕ ನನ್ನ ತಾಯಿ ಕಾಣೆಯಾಗಿದ್ದಾರೆ. ಆ ಅಶ್ಲೀಲ ಚಿತ್ರದಲ್ಲಿ ನನ್ನ ತಾಯಿಯ ಚಿತ್ರವೂ ಇದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಸಂತ್ರಸ್ತೆಯ ಮಗ ನೀಡಿರುವ ದೂರಿನಲ್ಲಿ, ಭವಾನಿ ಅಕ್ಕ ಕರೆಯುತ್ತಿದ್ದಾರೆಂದು ಹೇಳಿ, ಸತೀಅಸ್ ಎಂಬಾತ ಬೈಕ್ ನಲ್ಲಿ ಕರೆದುಕೊಂಡು ಹೋದ. ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಪಕ್ಕದ ಮನೆಯಲ್ಲಿ ತಾಯಿ ಕೆಲಸ ಮಾಡಿಕೊಂಡಿದ್ದರು. ಸುಮಾರು ಆರು ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದರು. ಲೋಕಸಭಾ ಚುನಾವಣೆಯ ವೇಳೆ ಸತೀಶ್ ಕರೆದುಕೊಂಡು ಹೋದ. ಸಂಜೆ ಮನೆಗೆ ಕರೆದುಕೊಂಡು ಬಂದು ಬಿಟ್ಟರು. ಪೊಲೀಸ್ ಬಂದರೆ ಏನು ಹೇಳಬೇಡಿ, ಅವರಿಗೆ ಯಾವುದೇ ಕಾರಣಕ್ಕೂ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಹಾಕುತ್ತಾರೆ. ಅವರು ಬಂದರೆ ನನಗೆ ನೀವೂ ತಿಳಿಸಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಸತೀಶ್ ಸ್ಪ್ಲೆಂಡರ್ ಬೈಕ್ ನಲ್ಲಿ ಕರೆದುಕೊಂಡು ಹೋದರು. ನನ್ನ ತಾಯಿಯನ್ನು ಎಲ್ಲಿಗೆ ಕರೆದೊಯ್ದರು ಎಂಬುದು ಗೊತ್ತಿಲ್ಲ. ಮೇ1 ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು‌. ನಿನ್ನ ಅಮ್ಮನ ಕಾಲು ಕಟ್ಟಿದ್ದರು. ಪ್ರಜ್ವಲ್ ಬಲತ್ಕಾರ ಮಾಡಿದರು ಎಂದು ಗೆಳೆಯರು ಹೇಳಿದರು ಎಂದು ಸಂತ್ರಸ್ತೆಯ ಮಗ ದೂರಿನಲ್ಲಿ ದಾಖಲಿಸಿದ್ದಾರೆ.

Advertisement
Tags :
Advertisement