ರೈತರಿಗಾಗಿ ಮಾಹಿತಿ : ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ
ಬೆಂಗಳೂರು: ಹಳ್ಳಿಗಳಲ್ಲಿ ಎಷ್ಟೋ ರೈತರಿಗೆ ಕೃಷಿ ಇಲಾಖೆಯಲ್ಲಿನ ಎಷ್ಟೋ ಯೋಜನೆಗಳೇ ತಲುಪುವುದಿಲ್ಲ. ಎಷ್ಟೋ ರೈತರು ನಗರದ ಕಡೆಗೂ ಬರುವುದಕ್ಕೆ ಪ್ರಯತ್ನ ಪಡಯವುದಿಲ್ಲ. ತಾವಾಯ್ತು, ತಮ್ಮ ಜಮೀನಾಯ್ತು ಎಂಬಂತೆ ಇರುತ್ತಾರೆ. ಹೀಗಿರುವಾಗ ಇದೀಗ ಕರ್ನಾಟಕ ಸರ್ಕಾರ ತಂದಿರುವ ಆದೇಶವೊಂದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಆರ್ಟಿಸಿ ಅಂದರೆ ಪಹಣಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿದೆ. ಈ ಜವಾಬ್ದಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿದೆ. ಆರ್ಟಿಸಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು, ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ದಗೊಳಿಸಿದೆ.ರೈತರು ಇನ್ನು ಮುಂದೆ ಸರ್ಕಾರದ ಸೌಲಭ್ಯವನ್ನು ಪಡೆಯುವುದಕ್ಕೆ ಆರ್ಟಿಸಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಿಸಬೇಕೆಂಬ ಆದೇಶ ಹೊರಡಿಸಿದೆ.
ಪಹಣಿಗೆ ಆಧಾರ್ ಕಾರ್ಡ್ ಜೋಡಿಸಲು ಗ್ರಾಮ ಆಡಳಿತ ಅಧಿಕಾರಿಗಳ ಪ್ರಕಟಣೆಯ ಮಾಹಿತಿಯ ಪ್ರಕಾರ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯ ಪಡೆಯಲು, ಕೃಷಿ ಇಲಾಖೆಯ ಸೌಲಭ್ಯ ಪಡೆಯಲು, ಬೆಳೆ ಪರಿಹಾರ ಪಡೆಯಲು ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಜಮೀನಿನ ಉತಾರ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮ ಒನ್ ಕೇಂದ್ರ ಅಥವಾ ಆನ್ಲೈನ್ ಮೂಲಕ ಲಿಂಕ್ ಮಾಡಬಹುದು. ಆರ್ಟಿಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದರಿಂದ ಭೂ ಸಂಬಂಧಿತ ವಂಚನೆಗಳನ್ನು ತಪ್ಪಿಸಬಹುದಾಗಿದೆ. ಮಾಲೀಕತ್ವದ ಖಚಿತತೆ ಖಚಿತ ಪಡಿಸಿಕೊಳ್ಳಲು ಸಹಾಯವಾಗುತ್ತದೆ. ಮೃತರಾದವರ ಹೆಸರಲ್ಲಿಯೇ ಇನ್ನು ಆರ್ಟಿಸಿ ಗಳು ಇದಾವೆ. ಆ ರೀತಿ 6 ಲಕ್ಷ ಆರ್ಟಿಸಿ ಗಳಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆರ್ಟಿಸಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಸರಿಯಾದ ಮಾಹಿತಿ ಸಿಗಲಿದೆ ಎಂಬ ಕಾರಣಕ್ಕೆ ಕಡ್ಡಾಯ ಮಾಡಲಾಗಿದೆ.