ಅಪರಾಧಿ ಜಗತ್ತಿಗೂ, ಕಾಂಗ್ರೆಸ್ ಗೂ ಅವಿನಾಭಾವ ಸಂಬಂಧ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರಸ್ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ಕಡೆಯಲ್ಲೆಲ್ಲಾ ಇಂಥದ್ದೇ ಘಟನೆಗಳು ನಡೆಯುತ್ತವೆ. ಕಾಂಗ್ರೆಸ್ಗೂ ಅಪರಾಧಕ್ಕೂ ಅವಿನಾಭಾವ ಸಂಬಂಧ ಎಂದು ಗರಂ ಆಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಂಥದ್ದೇ ಪರಿಸ್ಥಿತಿ ಇತ್ತು. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರಗಳು ಇರುತ್ತದೋ, ಅಲ್ಲೆಲ್ಲಾ ಇಂಥ ಘಟನೆಗಳು ನಡೆಯುತ್ತವೆ ಎಂದಿದ್ದಾರೆ. ಈ ಘಟನೆಯನ್ನು ಬಿಜೆಪಿ ನಾಯಕರು ತೀವ್ರ ಖಂಡಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಸಂಸತ್ನಲ್ಲಿ ನಡೆದ ದಾಳಿ ಬಗ್ಗೆ ಮಾತನಾಡಿದ್ದು, ಇದು ಕಿಡಿಗೇಡಿಗಳು ಮಾಡಿದ ಘಟನೆಯಲ್ಲ. ಅದೊಂದು ವ್ಯವಸ್ಥಿತವಾದಂತ ಪಿತೂರಿಯಾಗಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವುದಕ್ಕೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನದಿಂದ ಸದನ ನಡೆಯುವುದಕ್ಕೆ ಅವಕಾಶ ನೀಡಲಿಲ್ಲ. ಈ ಹಿಂದೆ ಪಿಸ್ತೂಲು ಹಿಡಿದುಕೊಂಡು ಒಳಗೆ ಪ್ರವೇಶಿಸಿದ ಘಟನೆಯೂ ನಡೆದಿತ್ತು. ಡ್ರ್ಯಾಗನ್ ತೆಗೆದುಕೊಂಡು ಎಂಟ್ರಿಯಾಗಿದ್ದರು. ಆಗೆಲ್ಲ ಪಾಸ್ ಕೊಟ್ಟವರು ಯಾರು ಎಂಬುದನ್ನು ಬಹಿರಂಗ ಪಡಿಸಲೇ ಇಲ್ಲ. ನಾವೂ ಇದನ್ನು ಬಹಳ ಸಂವೇಧನಾಶೀಲವಾಗಿ ತೆಗೆದುಕೊಂಡಿದ್ದೇವೆ. ಸ್ಪೀಕರ್ ಉನ್ನತ ತನಿಖೆಗೆ ಆದೇಶ ಮಾಡಿದ್ದಾರೆ. ಹೀಗಾಗಿ ಪೊಲೀಸರು ಕೂಡ ಹೈಲೆವೆಲ್ ನಲ್ಲಿಯೇ ತನಿಖೆಯನ್ನು ನಡೆಸುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಭಯೋತ್ಪಾದಕ ದಾಳಿ ನಿಂತು ಹೋಗಿತ್ತು. ಬ್ರಿಟಿಷ್ ಕಾನೂನು ತೆಗೆದು ಹೊಸ ಕಾನೂನು ತರಬೇಕಿದೆ. ಆದರೆ ವಿಪಕ್ಷಗಳು ಇಲ್ಲಿಯ ತನಕ ಸದನ ನಡೆಯುವುದಕ್ಕೆ ಬಿಟ್ಟಿಲ್ಲ ಎಂದಿದ್ದಾರೆ.