Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭಾರತ Vs ದಕ್ಷಿಣ ಆಫ್ರಿಕಾ : 243 ರನ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ ಭಾರತ

09:18 PM Nov 05, 2023 IST | suddionenews
Advertisement

ಸುದ್ದಿಒನ್ : 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯರಾಗುಳಿದಿರುವ ಟೀಂ ಇಂಡಿಯಾ, ವಿಶ್ವಕಪ್ ಗೆಲ್ಲುವ ಗುರಿಗೆ ಅಡ್ಡಿಯಾಗಿದ್ದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ ಫಲಿತಾಂಶ ಒಂದೇ ಅದು ಗೆಲುವು ಮಾತ್ರ. ಟೂರ್ನಿಯಲ್ಲಿ ಅಪ್ರತಿಮ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 243 ರನ್ ಗಳ ಅಂತರದಿಂದ ಮಣಿಸಿತು. ಸತತ ಎಂಟನೇ ಬಾರಿ ಪಂದ್ಯಾವಳಿಯನ್ನು ಗೆದ್ದ ನಂತರ, ಅವರು ಟೇಬಲ್ ಟಾಪರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

Advertisement

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, 327 ರನ್ ಗಳನ್ನು ಗಳಿಸಿ, ದಕ್ಷಿಣ ಆಫ್ರಿಕಾ ವನ್ನು 83 ರನ್ ಗಳಿಗೆ ಔಟ್ ಮಾಡಿದರು. ಈ ಮೂಲಕ  ಟೀಂ ಇಂಡಿಯಾ 243 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಕಿಂಗ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾದವರಿಗೆ ಎರಡನೇ ಓವರ್ ನಲ್ಲಿ ಆಘಾತ ಕಾದಿತ್ತು. ಟೂರ್ನಿಯಲ್ಲಿ ನಾಲ್ಕು ಶತಕ ಬಾರಿಸಿ ಫುಲ್ ಫಾರ್ಮ್ ನಲ್ಲಿದ್ದ ಕ್ವಿಂಟನ್ ಡಿ ಕಾಕ್ (5) ಎರಡನೇ ಓವರ್ ನಲ್ಲಿ ಹೈದರಾಬಾದ್ ಎಕ್ಸ್ ಪ್ರೆಸ್ ಸಿರಾಜ್ ಮಿಯಾ ಅವರ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಆ ನಂತರ ತೆಂಬಾ ಬಾವುಮಾ ಮತ್ತು ವ್ಯಾನ್ ಡೆರ್ ಡುಸೆನ್ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತರೂ ರವೀಂದ್ರ ಜಡೇಜಾ ಅಬ್ಬರಕ್ಕೆ ಇಡೀ ಚಿತ್ರ್ರಣವೇ ಬದಲಾಯಿತು. ಮೊದಲು ಬವುಮಾ (11) ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಔಟಾದರು.. ಮಾರ್ಕ್ರಾಮ್ (9) ಅವರನ್ನು ಶಮಿ ಪೆವಿಲಿಯನ್ ಕಳಿಸಿದರು. ಆ ಬಳಿಕ ಜಡೇಜಾ ವಿಜೃಂಭಿಸುತ್ತಿದ್ದಂತೆ ಬ್ಯಾಟ್ಸ್ ಮನ್ ಗಳು  ಪೆವಿಲಿಯನ್ ಗೆ ಸಾಲುಗಟ್ಟಿದರು. ಇದರಿಂದಾಗಿ ಎದುರಾಳಿ ತಂಡ 27.1 ಓವರ್‌ಗಳಲ್ಲಿ 83 ರನ್‌ಗಳಿಗೆ ಆಲೌಟ್ ಆದರು.

Advertisement

ಭಾರತದ ಪರ ಬೌಲರ್‌ಗಳಲ್ಲಿ ಜಡೇಜಾ ಐದು ವಿಕೆಟ್ ಪಡೆದರು.ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ರೋಹಿತ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ (40) ಟೀಂ ಇಂಡಿಯಾ 4.3 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತ್ತು.  ಏಳನೇ ಓವರ್ ನಲ್ಲಿ ರೋಹಿತ್ ಔಟ್ ಆಗುವ ಹೊತ್ತಿಗೆ ಟೀಂ ಇಂಡಿಯಾ 63 ರನ್ ಗಳಿಸಿತ್ತು.

ಆ ಬಳಿಕ ಕೊಹ್ಲಿ ಹಾಗೂ ಗಿಲ್ ಕೆಲಕಾಲ ಇನಿಂಗ್ಸ್ ಮುನ್ನಡೆಸಿದರು. 11ನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಅವರ ಸೂಪರ್ ಎಸೆತದಲ್ಲಿ ಗಿಲ್ (23) ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಂ ಇಂಡಿಯಾ 93 ರನ್ ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೋಡಿ ತುಸು ಹೆಚ್ಚು ಆಡಿದ್ದರಿಂದ ಸ್ಕೋರ್ ನಿಧಾನವಾಯಿತು. ಆದರೆ ಸ್ವಲ್ಪ ಸಮಯದ ನಂತರ ಶ್ರೇಯಸ್ ಅಯ್ಯರ್ ಮಿಂಚಿದರು. ಅರ್ಧಶತಕ ಪೂರೈಸಿದ ಅಯ್ಯರ್ (77) ಬೃಹತ್ ಹೊಡೆತಕ್ಕೆ ಯತ್ನಿಸಿ ಪೆವಿಲಿಯನ್ ತಲುಪಿದರು. ಈ ಮೂಲಕ ಮೂರನೇ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ಅಂತ್ಯಗೊಂಡಿತು.

ಆ ಬಳಿಕ ಸತತ ಅಂತರದಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ ವಿರಾಟ್ ಕೊಹ್ಲಿ (101) ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಬೃಹತ್ ಮೊತ್ತ ಪೇರಿಸಿದರು.

ಸಚಿನ್ ತೆಂಡೂಲ್ಕರ್ ಅವರ ಏಕದಿನದಲ್ಲಿ ಅತಿ ಹೆಚ್ಚು ಶತಕಗಳ (49) ದಾಖಲೆಯನ್ನು ಸರಿಗಟ್ಟಿದರು. ಸೂರ್ಯಕುಮಾರ್ ಯಾದವ್ (22) ಮತ್ತು ಜಡೇಜಾ (29) ರನ್ ಗಳಿಸಿ ಮಿಂಚಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಎನ್‌ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಶಮ್ಸಿ ತಾಲೊ ವಿಕೆಟ್ ಪಡೆದರು.

Advertisement
Tags :
51 ಭಾರತೀಯರುIndia vs south africaIndia wonnew Delhiನವದೆಹಲಿಭರ್ಜರಿ ಗೆಲುವುಭಾರತ Vs ದಕ್ಷಿಣ ಆಫ್ರಿಕಾ
Advertisement
Next Article