Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

India v Sri Lanka : ಭಾರತದ ‌ಬೌಲರ್ ಗಳ ಅಬ್ಬರಕ್ಕೆ ಮಂಕಾದ ಲಂಕಾ : 302 ರನ್‌ಗಳ ಅಂತರದ ಭರ್ಜರಿ ಗೆಲುವು

09:21 PM Nov 02, 2023 IST | suddionenews
Advertisement

ಸುದ್ದಿಒನ್ : ಮೈದಾನ ಬದಲಾಗಿದೆ, ಪಂದ್ಯ ಬದಲಾಗಿದೆ,  ಆದರೆ ಫಲಿತಾಂಶ ಬದಲಾಗಿಲ್ಲ. ಅದೇ ತಂಡಗಳು ಅದೇ ದೃಶ್ಯ ಅದೇ ಫಲಿತಾಂಶ. ಏಷ್ಯಾಕಪ್ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಶ್ರೀಲಂಕಾವನ್ನು ಭಾರತ ತಂಡ ಮತ್ತೊಮ್ಮೆ ಸೋಲಿಸಿದೆ. ಈ ಬಾರಿ ಮತ್ತಷ್ಟು ಹೀನಾಯವಾಗಿ ಸೋತಿದೆ. ಎರಡು ತಿಂಗಳ ಕಳೆದಿದೆ ಅಷ್ಟೇ. ಲಂಕಾ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾದ ಬೌಲರ್ ಗಳ ಅಟ್ಟಹಾಸ ಕಂಡು ಬೆಚ್ಚಿ ಬಿದ್ದಿದ್ದಾರೆ. ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಏಳನೇ ಗೆಲುವು ಸಾಧಿಸಿದೆ. ಈ ಮೂಲಕ 2023ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

Advertisement

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡ್ ಪ್ರದರ್ಶನದ ಮೂಲಕ ಮೋಡಿ ಮಾಡಿದೆ. ಬ್ಯಾಟ್ಸ್ ಮನ್ ಗಳು ಉತ್ತಮ ಗುಣಮಟ್ಟದ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 358 ರನ್ ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಆ ಬಳಿಕ ಲಂಕಾ ವಿರುದ್ಧ
ಭಾರತದ ಬೌಲರ್‌ಗಳ ಅಬ್ಬರಕ್ಕೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಒಬ್ಬರೂ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.
ಮೊದಲು ಬುಮ್ರಾ, ಸಿರಾಜ್.. ನಂತರ ಮೊಹಮ್ಮದ್ ಶಮಿ ಹೀಗೆ ಪ್ರತಿಯೊಬ್ಬ ಬೌಲರ್ ಶ್ರೀಲಂಕಾದ ಬ್ಯಾಟ್ಸ್‌ಮನ್ ಗಳನ್ನು ಚಂಡಾಡಿದರು. ಇದರೊಂದಿಗೆ ಶ್ರೀಲಂಕಾ 19.4 ಓವರ್‌ಗಳಲ್ಲಿ 55 ರನ್‌ಗಳಿಗೆ ಕುಸಿಯಿತು. ಟೀಂ ಇಂಡಿಯಾ 302 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತ್ತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಶುಭಮನ್ ಗಿಲ್ 92, ವಿರಾಟ್ ಕೊಹ್ಲಿ 88 ಮತ್ತು ಶ್ರೇಯಸ್ ಅಯ್ಯರ್ 82 ರನ್ ಗಳಿಸಿದರು. ಇದರಿಂದಾಗಿ ವಿಶ್ವಕಪ್‌ನಲ್ಲಿ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ಶತಕ ಸಿಡಿಸದೇ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಯಿತು.  ಲಂಕಾ ಬೌಲರ್‌ಗಳ ಪೈಕಿ ದಿಲ್ಶಾನ್ ಮಧುಶಂಕ ಐದು ವಿಕೆಟ್ ಪಡೆದರು.

Advertisement

ಬಳಿಕ 358 ರನ್ ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಲಂಕಾ ಟೀಂ ಇಂಡಿಯಾ ಬೌಲರ್ ಗಳ ಆರ್ಭಟಕ್ಕೆ ನಲುಗಿ ಹೋದರು. ಬುಮ್ರಾ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ನಿಶಾಂಕ ಅವರನ್ನು ಎಲ್‌ಬಿಡಬ್ಲ್ಯು ಮಾಡಿದರು. ಆ ಮೂಲಕ ಶ್ರೀಲಂಕಾಗೆ ಮೊದಲ ಆಘಾತ ನೀಡಿದರು. ಆ ಬಳಿಕ ಮೊಹಮ್ಮದ್ ಸಿರಾಜ್ ಲಂಕಾ ದಾಂಡಿಗರನ್ನು ಪೆವಿಲಿಯನ್ ಕಳುಹಿಸಿದರು.

ಸಿರಾಜ್ ಅವರ ಮೊದಲ ಏಳು ಎಸೆತಗಳಲ್ಲಿ ಶ್ರೀಲಂಕಾದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಗೆ ತಲುಪಿದರು. ಮೊದಲ ಏಳು ಎಸೆತಗಳಲ್ಲಿ ಒಂದೇ ಒಂದು ರನ್ ನೀಡದೆ ಮೂರು ವಿಕೆಟ್ ಕಬಳಿಸಿದ ಸಿರಾಜ್ ಮಿಯಾ ಏಷ್ಯಾಕಪ್ ಫೈನಲ್ ನ ದೃಶ್ಯವನ್ನು ಪುನರಾವರ್ತಿಸಿದರು. ಇದರೊಂದಿಗೆ ಶ್ರೀಲಂಕಾ ಮೂರು ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆ ಬಳಿಕ ಮೊಹಮ್ಮದ್ ಶಮಿ ಪ್ರವೇಶದಿಂದ ಲಂಕಾ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆದ ಶಮಿ ವಿಶ್ವಕಪ್ ನಲ್ಲೂ ಫಾರ್ಮ್ ಮುಂದುವರಿಸಿದರು. ಇದರಿಂದಾಗಿ ಲಂಕಾ 14 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆದರೆ ಕೊಂಚ ಹೋರಾಟ ನಡೆಸಿದ್ದರಿಂದ ಅಂತಿಮವಾಗಿ 55 ರನ್‌ಗಳಿಗೆ ಕುಸಿಯಿತು. ಭಾರತದ ಬೌಲರ್‌ಗಳಲ್ಲಿ ಶಮಿ 5 ವಿಕೆಟ್, ಮೊಹಮ್ಮದ್ ಸಿರಾಜ್ 3 ವಿಕೆಟ್ ಮತ್ತು ಬುಮ್ರಾ ಒಂದು ವಿಕೆಟ್ ಪಡೆದರು.

ಶ್ರೀಲಂಕಾದ ಐವರು ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ದಾಳಿಗೆ ಔಟಾದರು. ಈ ಸೋಲಿನೊಂದಿಗೆ ಶ್ರೀಲಂಕಾ ವಿಶ್ವಕಪ್‌ನಲ್ಲಿ ಸೆಮಿಸ್‌ ರೇಸ್‌ನಿಂದ ಹಿಂದೆ ಸರಿಯಿತು. ಮತ್ತೊಂದೆಡೆ ಟೂರ್ನಿಯಲ್ಲಿ ಸತತ ಏಳನೇ ಜಯ ಸಾಧಿಸಿದ ಭಾರತ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

Advertisement
Tags :
302 ರನ್‌302-run victoryIndia v Sri LankaIndia vs sri lankaIndian bowlerLanka lostnew Delhiಅಬ್ಬರಕ್ಕೆ ಮಂಕಾದ ಲಂಕಾನವದೆಹಲಿಭರ್ಜರಿ ಗೆಲುವುಭಾರತದ ‌ಬೌಲರ್
Advertisement
Next Article