For the best experience, open
https://m.suddione.com
on your mobile browser.
Advertisement

PDO ಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟ ಪ್ರತಿಭಟನೆ ಹಾಗೂ ಬೆಂಗಳೂರು ಚಲೋ : ಚಿತ್ರದುರ್ಗದಲ್ಲಿ ಸಂಘದ ಅಧ್ಯಕ್ಷ ನಯಾಜ್ ಹೇಳಿಕೆ

02:57 PM Nov 08, 2023 IST | suddionenews
pdo ಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟ ಪ್ರತಿಭಟನೆ ಹಾಗೂ ಬೆಂಗಳೂರು ಚಲೋ   ಚಿತ್ರದುರ್ಗದಲ್ಲಿ ಸಂಘದ ಅಧ್ಯಕ್ಷ ನಯಾಜ್ ಹೇಳಿಕೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ,  ನವೆಂಬರ್. 08 :
ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳಿಗಾಗಿ  ಇಲಾಖೆಯೊಂದಿಗೆ ಅಸಹಕಾರ ನೀಡುವ ಮೂಲಕ ಪ್ರತಿಭಟನೆ ಆರಂಭಿಸಲಾಗಿದೆ ಎಂದು ಜಿಲ್ಲಾ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಯಾಜ್ ತಿಳಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ಪ್ರತಿ ಯೋಜನೆಗಳನ್ನು ಗ್ರಾಮದ ಪ್ರತಿ ಮನೆಗೂ ಹಗಲಿರುಳು ಶ್ರಮವಹಿಸಿ ತಲುಪಿಸುತ್ತಿದ್ದೇವೆ, ಇದರಿಂದ ಗ್ರಾಮೀಣ ಜನರ ಜೀವನಮಟ್ಟ ಬದಲಾವಣೆಗೆ ಸಾಕ್ಷಿ ಏನೆಂದರೆ ಇಲಾಖೆಯು 2010 ರಿ0ದ ಇಲ್ಲಿಯವರೆಗೆ ತೆಗೆದುಕೊಂಡಿರುವ ಹಲವಾರು ರಾಷ್ಟ್ರ, ಮಟ್ಟದ ಪ್ರಶಸ್ತಿಗಳು ಮತ್ತು ಗೌರವಗಳು.

ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವೈಯಕ್ತಿಕ ಮತ್ತು ಸಾಮಾಜಿಕ ಬದುಕು ಕತ್ತಲೆಯ ಕೂಪವಾಗಿದೆ ಇದಕ್ಕೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಕಾರಣರಾಗಿರುತ್ತಾರೆ ಎಂದು ದೂರಿದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುದ್ದೆ ಸೃಷ್ಟಿಯಾಗಿ ಹದಿಮೂರು ವರ್ಷಗಳು ಕಳೆದರೂ ಸಹ ಒಂದು ಕಾನೂನು ಬದ್ದವಾದ ಜೇಷ್ಠತಾ ಪಟ್ಟಿಯನ್ನು ಅ0ತಿಮಗೊಳಿಸಿಲ್ಲ ಇದರ ಬಗ್ಗೆ ನ್ಯಾಯಾಲಯವೂ ಸಹಾ ನಿರ್ದೆಶನ ನೀಡಿದ್ದರು ಸಹಾ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ.

ರಾಜ್ಯದ ತಾಲೂಕು ಪಂಚಾಯತಿಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾ.ಉ & ಪಂ.ರಾ) ಹುದ್ದೆಗಳಿಗೆ ಬಡ್ತಿ ನೀಡಲು ವಿಳಂಬಧೋರಣೆ ಅನುಸರಿಸುತ್ತಿರುವುದು. ಇದುವರೆವಿಗೂ ಸಹಾ ನಾವು ಇರುವ ಹುದ್ದೆಗಳಲ್ಲಿಯೇ ಕಾಲವನ್ನು ಕಳೆಯಲಾಗುತ್ತಿದೆ.  ರಾಜ್ಯದ ಎಲ್ಲಾ ಪ0ಚಾಯತ ಅಭಿವೃದ್ದಿ ಅಧಿಕಾರಿಗಳ ಹುದ್ದೆಗಳನ್ನು “ಬಿ” ವೃಂದಕ್ಕೆ ಮೇಲ್ದರ್ಜೆಗೆರಿಸುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿ ಸಭೆಯನ್ನು ಮಾಡಿದ್ದರು ಸಹಾ ಇದುವರೆವಿಗೂ ಸಹಾ ಯಾವುದೇ ಕ್ರಮವನ್ನು ಕೈಗ್ಗೊಂಡಿಲ್ಲ,  ಸಾಮಾನ್ಯ ವರ್ಗಾವಣೆ ಅವಧಿ ಮುಗಿದರೂ ಸಹ ನಿಯಮ ಮೀರಿ ನಿರಂತರ ವರ್ಗಾವಣೆ ಮಾಡುತ್ತಿರುವುದು ಹಾಗೂ ಹಲವಾರು ಭಾದಿತ ನೌಕರರಿಗೆ ಸ್ಥಳ ನಿಯುಕ್ತಿ ಮಾಡದೇ, ವೇತನ ಸಹ ಮಾಡದೇ ಇರುವುದು. ಸಹಾ ನಡೆದಿದೆ ಎಂದಿದ್ದಾರೆ.

ಈ ಆಸಹಕಾರ ಸಮಯದ ಕಾಲಾವಕಾಶದೊಳಗಾಗಿ, ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿರುವುದಿಲ್ಲ, ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸೇವಾ ವಿಷಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಕಾಳಜಿ ಇರುವುದಿಲ್ಲ, ಇದರಿಂದ ವೈಯಕ್ತಿಕ ಆತ್ಮಗೌರವ ಹಾಗೂ ಸಾಮಾಜಿಕ ಮನ್ನಣೆಯಿಂದ ವಂಚಿತರಾಗಿ ರಾಜ್ಯದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರಭಾರ ಹೊಂದಿರುವ ಸಹಾಯಕ ನಿರ್ದೇಶಕರು (ಗ್ರಾ.ಉ. & ಪಂ.ರಾ) ಕೆಲಸ ನಿರ್ವಹಿಸದೇ ದಿನಾ0ಕ: 08.11.2023 ರಿಂದ ಮೊದಲ ಹ0ತವಾಗಿ ಇಲಾಖೆಯ ವಾಟ್ಸಪ್/ಟೆಲಿಗ್ರಾಂ ಗು0ಪುಗಳಿ0ದ ಹೊರಬರುವುದರೊಂದಿಗೆ ಆನ್ ಲೈನ್, ಸೇವೆಗಳನ್ನು  ಸ್ಥಗಿತಗೊಳಿಸಿ, ಮೇಲಾಧಿಕಾರಿಗಳು ಕರೆಯುವ ಸಭೆಗಳಿಗೂ ಸಹ ಗೈರುಹಾಜರಾಗುವುದು ಹಾಗೂ ಮೂಲಭೂತ ಸೇವೆಗಳನ್ನು ಮಾತ್ರ ನೀಡುವುದರೊ0ದಿಗೆ ನಮ್ಮ ನ್ಯಾಯಯುತ ಬೇಡಿಕೆಗಾಗಿ ಇಲಾಖೆಯೊಂದಿಗೆ “ಅಸಹಕಾರ” ನೀಡುವ ಮೂಲಕ ಪ್ರತಿಭಟನೆ ಆರಂಭಿಸಲು ತೀರ್ಮಾನಿಸಲಾಗಿದೆ.

ಸದರಿ ಅವಧಿಯಲ್ಲಿ ನಮ್ಮ ಬೇಡಿಕೆಗಳಿಗೆ  ಸ್ಪಂದನೆ  ಸಿಗದೇ ಇದ್ದರೆ, ಜಿಲ್ಲಾ ಪಂಚಾಯತಿಗಳ ಮುಂದೆ ಅನಿರ್ದಿಷ್ಟ ಪ್ರತಿಭಟನೆ ಹಾಗೂ  ಬೆಂಗಳೂರು ಚಲೋ ಕರೆ ಕೊಡಲಾಗುವುದು, ಕಾರಣ ಸಚಿವರು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಳನ್ನು ಈಡೇರಿಸಲು ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.

ಗೋಷ್ಟಿಯಲ್ಲಿ  ಪಾತಣ್ಣ, ಕ್ರೀಡಾ ಕಾರ್ಯದರ್ಶಿ ಶೃತಿ, ಸಾಂಸ್ಕೃತಿಕ ಕಾರ್ಯದರ್ಶಿ ಗೌತಮಿ, ಉಪಾಧ್ಯಕ್ಷ ಶೃತಿ ತಾಲ್ಲೂಕು ಅಧ್ಯಕ್ಷ ಸಂತೋಷ್ ಉಪಸ್ಥಿತರಿದ್ದರು.

Advertisement
Tags :
Advertisement