For the best experience, open
https://m.suddione.com
on your mobile browser.
Advertisement

IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು...

10:01 PM Oct 29, 2023 IST | suddionenews
ind vs eng  ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
Advertisement

ಸುದ್ದಿಒನ್ : ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಶಕ್ತಿ ಪ್ರದರ್ಶನ ಮಾಡಿದೆ. 100 ರನ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಸತತ ಆರನೇ ಜಯ ದಾಖಲಿಸಿದೆ. 230 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 129 ರನ್‌ಗಳಿಗೆ ಆಲೌಟಾಯಿತು. ಮತ್ತೊಂದೆಡೆ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮೀಸ್ ಗೆ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದೆ. ಟೂರ್ನಿಯಲ್ಲಿ ಐದನೇ ಸೋಲು ಕಂಡಿರುವ ಇಂಗ್ಲೆಂಡ್ ಸೆಮಿಸ್ ಅವಕಾಶವನ್ನು ಬಹುತೇಕ ಕಳೆದುಕೊಂಡಂತಾಗಿದೆ.

Advertisement
Advertisement

ಇಂಗ್ಲೆಂಡ್ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟಾಯಿತು. ಭಾರತದ ಬೌಲರ್ ಗಳ ಪೈಕಿ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಶಮಿ 22 ರನ್ ನೀಡಿ 4 ವಿಕೆಟ್ ಪಡೆದರು. ಬುಮ್ರಾ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.  ಜವಾಬ್ದಾರಿಯುತ ಇನಿಂಗ್ಸ್‌ ಆಡಿದ ರೋಹಿತ್‌ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Advertisement
Advertisement
Advertisement
Tags :
Advertisement