ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಳ : ಏರಿಕೆಯಾಗಿದ್ದು ಎಷ್ಟು..?
ಬೆಂಗಳೂರು: ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆಯತ್ತಲೇ ಮುಖ ಮಾಡಿದೆ. ಗುರುವಾರವಷ್ಟೇ ಗ್ರಾಂಗೆ ಹತ್ತು ರೂಪಾಯಿ ಏರಿಕೆಯಾಗಿತ್ತು. ಈಗ ಮತ್ತೆ ಇಂದು ಒಂದು ರೂಪಾಯಿ ಏರಿಕೆಯಾಗಿದೆ. ಈ ವಾರಪೂರ್ತಿ ಚಿನ್ನದ ಬೆಲೆಯಲ್ಲಿ ಏರಿಕೆಯತ್ತಲೇ ಮುಖ ಮಾಡುತ್ತಿದೆ. ಬೆಳ್ಳಿ ಬೆಲೆಯಲ್ಲೂ ಕಡಿಮೆ ಏನು ಇಲ್ಲ. ಏರಿಕೆಯನ್ನೇ ಕಂಡಿದೆ. ಇಂದು ಹತ್ತು ಪೈಸೆಯಷ್ಟು ಏರಿಕೆಯಾಗಿದೆ.
ಹಾಗಾದ್ರೆ ಇಂದು ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ ಎಷ್ಡಿದೆ ಎಂಬುದನ್ನು ನೋಡೋಣಾ:
22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ ಈಗ 71,410 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 77,900 ರೂಪಾಯಿ ಆಗಿದೆ 100 ಗ್ರಾಂ ಬೆಳ್ಳಿ ಬೆಲೆ 9,210 ರೂಪಾಯಿ ಆಗಿದೆ.
ಇನ್ನು ಭಾರತದ ಬೇರೆ ಬೇರೆ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ:
ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರ ನಗರದಲ್ಲಿ ಹತ್ತು ಗ್ರಾಂ ಚಿನ್ನದ ದರ 71,410 ರೂಪಾಯಿ ಇದೆ. ದೆಹಲಿ, ಅಹ್ಮದಾಬಾದ್, ಜೈಪುರ, ಲಕ್ನೋ ನಗರ ಭಾಗದಲ್ಲಿ ದರ ಏರಿಳಿತವಾಗಿದೆ. ಬೆಳ್ಳಿ ಬೆಲೆಯಲ್ಲಿ 100 ಗ್ರಾಂಗೆ ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋದಲ್ಲಿ 9,21೦ ರೂಪಾಯಿ ಇದೆ. ಉಳಿದಂತೆ ಚೆನ್ನೈ, ಭುವನೇಶ್ವರ, ಜೇರಳದಲ್ಲಿ ಬೆಳ್ಳಿ ಬೆಲೆ 10,110 ರೂಪಾಯಿ ಇದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆ ಇದೆ. ಮಲೇಷ್ಯಾ 69,500, ದುಬೈ 68,470, ಅಮೆರಿಕಾ 66,050, ಸಿಂಗಾಪುರ 68,670 ರೂಪಾಯಿ ಇದೆ. ಆದರೆ ಭಾರತದಲ್ಲಿರುವವರು ವಿದೇಶದಿಂದ ಹೆಚ್ಚಿನ ಮಟ್ಟಕ್ಕೆ ಚಿನ್ನವನ್ನು ಖರೀದಿ ಮಾಡಿಕೊಂಡು ಬರುವುದಕ್ಕೆ ಆಗಲ್ಲ.