For the best experience, open
https://m.suddione.com
on your mobile browser.
Advertisement

ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಳ..!

11:34 AM Feb 16, 2024 IST | suddionenews
ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಳ
Advertisement

Advertisement
Advertisement

Advertisement

ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ಅವರು 15ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಸವಾದಿ ಶರಣ ಕಾಯಕ, ದಾಸೋಹ ತತ್ವ ನಮಗೆ ಪ್ರೇರಣೆ ಎಂದು ಹೇಳುವ ಮೂಲಕ ಸದನದಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. ಆರಂಭದಲ್ಲಿ ಡಾ.ರಾಜ್‍ಕುಮಾರ್ ಅವರ ಆಗದು ಎಂದು ಕೈ ಕಟ್ಟಿ ಕುಳಿತರೆ ಹಾಡು ಹಾಡುವ ಮೂಲಕ ಬಜೆಟ್ ಘೋಷಣೆ ಶುರು ಮಾಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 3,71,383 ಕೋಟಿಯಾಗಿದೆ.

Advertisement
Advertisement

ಮದ್ಯ ಪ್ರಿಯರಿಗೆ ಈ ಬಾರಿಯ ಬಜೆಟ್ ನಲ್ಲೂ ಶಾಕ್ ನೀಡಲಾಗಿದೆ. ಮದ್ಯದ ಬೆಲೆಯನ್ನು ಈ ಬಾರಿಯೂ ಹೆಚ್ಚಳ ಮಾಡಲಾಗಿದೆ. ಇದು ಎರಡನೇ ಬಾರಿಗೆ ಮದ್ಯದ ಬೆಲೆ ಹೆಚ್ಚಳವಾಗಿದ್ದು, ಮದ್ಯ ಪ್ರಿಯರಿಗೆ ಬೇಸರ ತರಿಸಿದೆ.

ಮದ್ಯದ ದರ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದ್ದು, 2024-26ರ ಬಜೆಟ್ ಮಂಡನೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಸರ್ಕಾರ ಈಗಾಗಲೇ ಎರಡು ಬಾರಿ ಮದ್ಯದ ದರ ಏರಿಕೆ ಮಾಡಿದ್ದು, ಈಗ ಮತ್ತೆ ಹೆಚ್ಚಳ ಮಾಡಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನು ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧಾರ ಮಾಡಲಾಗಿದೆ.

2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ ಅವಕಾರಿ ತೆರಿಗೆಯಿಂದ 28,181 ಕೋಟಿ ಸ್ವೀಕಾರವಾಗಿದೆ. 2024-25 ರ ಸಾಲಿಗೆ 38,525 ಕೋಟಿ ರಾಜಸ್ವ ಸಂಗ್ರಹಣೆಯ ಗುರಿಯನ್ನು ಹೊಂದಿದೆ. ಹೀಗಾಗಿ ಮದ್ಯದ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಿದೆ ರಾಜ್ಯ ಸರ್ಕಾರ.

Advertisement
Tags :
Advertisement