Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಂದಾಯ ತೆರಿಗೆ ಹೆಚ್ಚಿಸಿರುವುದು ಮೌಲ್ವಿಗಳಿಗೆ ಹಣ ಕೊಡುವುದಕ್ಕೆ : ಆರ್ ಅಶೋಕ್ ವಾಗ್ದಾಳಿ

05:25 PM Dec 12, 2023 IST | suddionenews
Advertisement

ಬೆಳಗಾವಿ: ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಜನರ ತೆರಿಗೆ ಹಣದಿಂದ ಮೌಲ್ವಿಗಳಿಗೆ ಹಣ ನೀಡಲಾಗುತ್ತಿದೆ. ಅದಕ್ಕೆ ತೆರಿಗೆ ಹೆಚ್ಚಳ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

Advertisement

ಸುವರ್ಣಸೌಧದಲ್ಲಿ ಮಾತನಾಡಿದ ಆರ್ ಅಶೋಕ್, ಎಲ್ಲದಕ್ಕೂ ತೆರಿಗೆ ಹೇರುವ ಸರ್ಕಾರವಿದು. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿ, ಜನರಿಗೆ ಹೆಚ್ಚಿನ ಹೊರೆ ಆಗಿದೆ. ರೈತರ ಸಮಸ್ಯೆ ಬಗ್ಗೆ ಇವರಿಗೆ ಗಮನವಿಲ್ಲ. ರೈತರಿಗೆ 25 ಸಾವಿರ ಕೊಡಿ ಎಂದು ಆಗ್ರಹಿಸಿದ್ದೇವೆ. ಬೆಳಗಾವಿ ಅಧಿವೇಶನವನ್ನು ಇನ್ನೂ ನಾಲ್ಕು ದಿನ ಮುಂದುವರೆಸಲು ಕೋರಿದ್ದೇವೆ. ಸರ್ಕಾರ ಅದ್ಯಾವುದಕ್ಕೂ ಸ್ಪಂದನೆ ತೋರುತ್ತಿಲ್ಲ. ತೆರಿಗೆ ಹೆಚ್ಚಳ ಮಾಡಿರುವುದು, ಮೌಲ್ವಿಗಳಿಗೆ ಹಣ ನೀಡಿರುವುದಕ್ಕೆ. ಈ ಸರ್ಕಾರ ಬೇಜವಬ್ದಾರಿ ಸರ್ಕಾರ.

ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ಬುಧವಾರ ಪ್ರತಿಭಟನೆ ನಡೆಸುತ್ತೇವೆ‌. ರಾಜ್ಯಕ್ಕಿಂತಲೂ ತೆಲಂಗಾಣದ ಮೇಲೆ ಈ ರಾಜ್ಯಕ್ಕೆ ಆಸಕ್ತಿ ಜಾಸ್ತಿ. ಇದು ದಿವಾಳಿಯಾಗಿರುವ ಸರ್ಕಾರ. ಉತ್ತರ ಕರ್ನಾಟಕ ಭಾಗದ ಜನರ ಹಿತವನ್ನು ಈ ಸರ್ಕಾರ ಕಡೆಗಣಿಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Advertisement

Advertisement
Tags :
bangalorebelagaviincome taxr ashokಆರ್ ಅಶೋಕ್ಕಂದಾಯ ತೆರಿಗೆಬೆಂಗಳೂರುಬೆಳಗಾವಿ
Advertisement
Next Article