For the best experience, open
https://m.suddione.com
on your mobile browser.
Advertisement

ರೈತರಿಗೆ ಪ್ರೋತ್ಸಾಹ ಧನ ಹಾಗೂ ಅನುದಾನ ಏರಿಕೆ : ಕೃಷಿ ಸಚಿವ ಚೆಲುವರಾಯಸ್ವಾಮಿ

01:29 PM Jun 26, 2024 IST | suddionenews
ರೈತರಿಗೆ ಪ್ರೋತ್ಸಾಹ ಧನ ಹಾಗೂ ಅನುದಾನ ಏರಿಕೆ   ಕೃಷಿ ಸಚಿವ ಚೆಲುವರಾಯಸ್ವಾಮಿ
Advertisement

ಬೆಳಗಾವಿ: ಚುನಾವಣೆಗಳು ಮುಗಿದ ಮೇಲೆ ಜನ ಸಾಮಾನ್ಯರಿಗೆ ಈ ಬೆಲೆ ಏರಿಕೆಯ ಬಗ್ಗೆಯೇ ಹೆಚ್ಚು ತಲೆ ಬಿಸಿ ಮಾಡಿಕೊಳ್ಳುವಂತ ಪರಿಸ್ಥಿತಿಗಳು ಯಾವಾಗಲೂ ಸೃಷ್ಠಿಯಾಗುತ್ತವೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ - ಡಿಸೇಲ್ ದರ ಏರಿಕೆಯಾಯ್ತು. ಅದರ ಬೆನ್ನಲ್ಲೇ ಈಗ ಹಾಲಿನ ದರವೂ ಏರಿಕೆಯಾಗಿದೆ. ಹಾಲನ್ನು ಹೆಚ್ಚು ಮಾಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಇದು ಸಾಮಾನ್ಯರಿಗೆ ಹೊರೆಯಾದಂತೆ ಆಗಿದೆ.

Advertisement

ಈ ಬಗ್ಗೆ ಮಾತನಾಡಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ರೈತರಿಗೂ ಈ ಮಧ್ಯೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಬಂದರೂ ಬೆಲೆ ಏರಿಕೆ ಆಗಿಯೇ ಆಗುತ್ತದೆ. ಯಾಕಂದ್ರೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ಹೀಗೆ ಬೆಲೆ ಏರಿಕೆ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನು ಇದೆ ವೇಳೆ ರೈತರ ಬಗ್ಗೆಯೂ ಮಾತನಾಡಿ, ರೈತರಿಗೆ ಕೊಡುವ ಸಬ್ಸಿಡಿ ಹಾಗೂ ಅನುದಾನದಲ್ಲೂ ಏರಿಕೆಯಾಗಯತ್ತದೆ ಎಂದು ಹೇಳಿದ್ದಾರೆ. ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಿದರೆ ತಪ್ಪು ಎಂದು ಹೇಳಬಹುದು. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ಕೂಡ ಕೊಟ್ಟಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ದರ ಕಡಿಮೆ ಇದೆ‌. ಹಾಲನ್ನು ಹೆಚ್ಚಳ ಮಾಡಿರುವ ಕಾರಣ ದರವನ್ನು ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ.

Advertisement

ಇದೇ ವೇಳೆ ರಾಹುಲ್ ಗಾಂಧಿ ಅವರುಗೆ ಕಾಣಿಕೆ ನೀಡಲು ದರ ಏರಿಕೆ ಮಾಡಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯೂ ಆಡಳಿತ ಮಾಡಿದೆ. ಆಗ ಎಷ್ಟು ಕೋಟಿ ಕೊಟ್ಟಿದೆ..? ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಎಷ್ಡು ಕೋಟಿ ಕೊಟ್ಟಿದ್ದಾರೆ. ಆದರೆ ನಾವೂ ಆ ರೀತಿ ಮಾಡಿಲ್ಲ ಎಂದಿದ್ದಾರೆ.

Advertisement
Tags :
Advertisement