Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿಂದು 279 ಜನರಿಗೆ ಕೋವಿಡ್ 19  : 3 ಸಾವು ಇಲ್ಲಿದೆ ಸಂಪೂರ್ಣ ಮಾಹಿತಿ...!

09:27 PM Jan 08, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.09 :
ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದಂದು 7 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 46766 ಕ್ಕೆ ಏರಿಕೆಯಾಗಿದೆ.

Advertisement

ಸೋಮವಾರ ಒಟ್ಟು 42 ಜನರ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 7 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸದ್ಯ 25 ಸಕ್ರಿಯ ಪ್ರಕರಣಗಳು ಇವೆ.

ರಾಜ್ಯದ ವರದಿ :
ಆರೋಗ್ಯ ಇಲಾಖೆ ಪ್ರತಿದಿನ ಕೊರೊನಾ ಟೆಸ್ಟ್ ಮಾಡುತ್ತಲೆ ಇದೆ. ಪ್ರತಿದಿನದ ಟೆಸ್ಟ್ ನಲ್ಲಿ ಕೊರೊನಾ ಹೆಚ್ಚಾಗುತ್ತಲೆ ಇದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 279 ಹೊಸ ಕೊರೊನಾ ಕೇಸ್ ದಾಖಲಾಗಿದೆ. ಈ ಮೂಲಕ 1222 ಕೊರೊನಾ ಕೇಸ್ ಸಕ್ರಿಯವಾಗಿವೆ.

Advertisement

ಕಳೆದ 24 ಗಂಟೆಯಲ್ಲಿ 6359 ಟೆಸ್ಟ್ ಗಳನ್ನು ಮಾಡಲಾಗಿದ್ದು, ಅದರಲ್ಲಿ 5512 RTPCR, 847 RAT ಟೆಸ್ಟ್ ಮಾಡಲಾಗಿದೆ. ಅದರಲ್ಲಿ 279 ಪಾಸಿಟಿವ್ ಕೇಸ್ ಗಳು ದಾಖಲಾಗಿದೆ. ಪಾಸಿಟಿವ್ ಕೇಸ್ 4.38% ಏರಿಕೆಯಾಗಿದೆ.

ಉಳಿದಂತೆ 3 ಸಾವಾಗಿದ್ದು, 1144 ಜನ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಜನ ಐಸಿಯು ನಲ್ಲಿದ್ದರೆ, 235 ಜನ ಡಿಸ್ಚಾರ್ಜ್ ಆಗಿದ್ದಾರೆ.

ಇದರಲ್ಲಿ ಬೆಂಗಳೂರು ನಗರ 134, ಹಾಸನ-13, ಮೈಸೂರು -23 ಕೇಸ್ ಗಳಯ ಕಾಣಿಸಿಕೊಂಡಿದ್ದು, ಕೆಲ ಜಿಲ್ಲೆಗಳಲ್ಲಿ ಹತ್ತಕ್ಕೂ ಕಡಿಮೆ ಕೇಸ್, ಇನ್ನು ಕೆಲ ಜಿಲ್ಲೆಗಳಲ್ಲಿ ಜೀರೋ ಕೇಸ್ ಗಳು ಕಂಡು ಬಂದಿವೆ.

Advertisement
Tags :
bangalorechitradurgacorona viruscovidCOVID 19davanagerefeaturedhealth bulletinlive updatesnew DelhiSECOND WAVE LIVE UPDATESsuddioneಕರೋನ ವೈರಸ್ ಲೈವ್ ಅಪ್ಡೇಟ್ಕೋವಿಡ್ ವರದಿಚಿತ್ರದುರ್ಗದಾವಣಗೆರೆನವದೆಹಲಿಬೆಂಗಳೂರುಸುದ್ದಿಒನ್
Advertisement
Next Article