ಅಧಿವೇಶನದಲ್ಲಿ ಡಿಕೆಶಿ ಸಿಎಂ ಆಗುವ ಬಗ್ಗೆಯೇ ಚರ್ಚೆ : ಆರ್.ಅಶೋಕ್ ಹೇಳಿದ್ದೇನು..?
ಬೆಳಗಾವಿ: ಇಂದು ಚಳಿಗಾಲದ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ನಡುವೆ ಒಂದಷ್ಟು ಹಾಸ್ಯಮಯ ಮಾತುಕತೆ ಜೊತೆಗೆ ಡಿಕೆಶಿ ಅವರಿಗೆ ಸಿಎಂ ಆಗಲು ಪರೋಕ್ಷವಾಗಿ ಒತ್ತಾಯಿಸಲಾಯ್ತು.
ನಾನು ಸ್ವತಂತ್ರವಾಗಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ನಾನು ರೆಬಲ್ ಕಾಂಗ್ರೆಸ್ ಆಗಿ ನಿಂತು ಗೆದ್ದೆ. ಒಂದು ಐದು ಜನರನ್ನು ಬುಕ್ ಮಾಡಿಕೊಂಡಿದ್ದೆ. ನನಗೆ ಈ ಪರಿಸ್ಥಿತಿ ಬಗ್ಗೆ ಗೊತ್ತಿತ್ತು. ಕಾಂಗ್ರೆಸ್ ಪಾರ್ಟಿಗೆ ಅಂದು 36 ಸೀಟು ಮಾತ್ರ ಇತ್ತು. ಆ ಸಂದರ್ಭದಲ್ಲಿ ನರಸಿಂಹ ರಾಯರನ್ನ ಭೇಟಿ ಮಾಡಬೇಕೆಂದು ಒಬ್ಬರು ನಮ್ಮನ್ನ ಕರೆದುಕೊಂಡು ಹೋದ್ರು. ನಾನು ಜಯಚಂದ್ರ ಇಬ್ಬರು ಹೋದೆವು. ಆಗ ನರಸಿಂಹರಾಯರು ನಮ್ಮ ಕಾಂಗ್ರೆಸ್ ಪಾರ್ಟಿಗೆ ವೋಟ್ ಹಾಕ್ಬೇಕು ಅಂತ ಹೇಳಿದ್ರು. ನಾನು ವೋಟ್ ಹಾಕಲ್ಲ ಎಂದಿದ್ದೆ. ನೀವೂ ಎಸ್ ಎಂ ಕೃಷ್ಣ ಅವರಿಗೆ ಕೊಟ್ಟರೆ ಮಾತ್ರ ವೋಟ್ ಹಾಕ್ತೀವಿ ಇಲ್ಲಂದ್ರೆ ಹಾಕಲ್ಲ ಎಂದಿದ್ದೆ. ಆಮೇಲೆ ಸಿಟ್ಟಿಂಗ್ ಮಿನಿಸ್ಟರ್ ತೆಗೆಸಿ ಕೃಷ್ಣ ಅವರಿಗೆ ನೀಡಿದರು ಎಂದು ಆ ಕಾಲದಲ್ಲಿನ ನೆನಪನ್ನ ಡಿಕೆ ಶಿವಕುಮಾರ್ ಅವರು ನೆನಪಿಸಿಕೊಂಡರು.
ಇದೆ ವೇಳೆ ಸದನದಲ್ಲಿ ಡಿಕೆಶಿ ಮತ್ತು ಆರ್ ಅಶೋಕ್ ನಡುವೆ ಹಾಸ್ಯಾಸ್ಪದ ಘಟನೆಯೂ ನಡೆದಿದೆ. ಅಶೋಕ್ ಆಸ್ಟ್ರಾಲಜಿಯವರು ನಂಗೇನು ಹೇಳಿದ್ದಾರೆಂದು ಸದನದಲ್ಲಿ ಹೇಳಿದರೆ ದಳದವರೆಲ್ಲ ಈ ಕಡೆಗೆ ಶಿಫ್ಟ್ ಆಗಿ ಬಿಡುತ್ತಾರೆ ಎಂದಾಗ ಎಲ್ಲರೂ ನಗೆಪಾಟಲಲ್ಲಿ ಮುಳುಗಿದ್ದಾರೆ. ಆಗ ಎದ್ದು ನಿಂತ ಅಶೋಕ್ ಅವರು, ಹೌದು ಅವರು ಹೇಳುವುದು ಸರಿಯಾಗಿಯೇ ಇದೆ. ಬಿಜೆಪಿನವರು ನನ್ನನ್ನ ಕರೆದ್ರ ಎಂದು ಕೇಳಿದರು. ನಾವೂ ಕೇಳಿಲ್ವಾ ನಿಮ್ಗೆ. ಮೋಸ್ಟ್ಲೀ ಅವರು ನಮ್ಮ ಜೊತೆಗೆ ಬರೋ ಥರ ಇದಾರೆ. ಆಗ ನಾವೂ ಅವರ ಜೊತೆಗೆ ಹೋಗಲ್ಲ ಎಂದಿದ್ದಾರೆ. ಆಗ ಡಿಕೆ ಶಿವಕುಮಾರ್ ಅವರು, ಸುನೀಲ್ ಹೇಳಯ್ಯ ನಾನು ನಿಮ್ ಕಡೆ ಬರ್ತೀನಾ. ಯೋಗೀಶ್ವರ್ ನಮ್ಮ ಸಿದ್ದರಾಮಯ್ಯ ಅವರನ್ನೇ ಕರೆಯುವುದಕ್ಕೆ ಹೋಗುದ್ರಂತೆ ಎಮ.ದು ಒಂದಷ್ಡು ಚರ್ಚೆಗಳಾಗಿದ್ದಾವೆ.