ಅಸಹಜ ಲೈಂಗಿಕ ಕ್ರಿಯೆ ಪ್ರಕರಣ : ಸೂರಜ್ ರೇವಣ್ಣನಿಗೆ ಷರತ್ತು ಬದ್ಧ ಜಾಮೀನು
ಬೆಂಗಳೂರು: ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪದ ಮೇಲೆ ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಪೊಲೀಸರು ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ಪ್ರಕರಣದ ತನಿಖೆ ನಡೆಸುತ್ತಿದ್ದರು. ಇಂದು ಕೋರ್ಟ್ ಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
*ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು.
* ಯಾವುದೇ ಕಾರಣಕ್ಕೂ ಅರ್ಜಿದಾರರು ಸಂತ್ರಸ್ತನನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು.
* ತಿಂಗಳ ಪ್ರತಿ ಎರಡನೇ ಭಾನುವಾರ ಹಾಗೂ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಐಒ ಮುಂದೆ ಹಾಜರಾಗಬೇಕು.
* ಆರು ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್ ಸಲ್ಲಿಸುವುದರೊಳಗೆ ಅರ್ಜಿದಾರ ಇದೇ ರೀತಿಯ ಅಪರಾಧವನ್ನು ಮಾಡುವಂತೆ ಇಲ್ಲ.
ಹೀಗೆ ಷರತ್ತುಗಳನ್ನು ವಿಧಿಸಿ, ನ್ಯಾಯಾಲಯವೂ ಜಾಮೀನು ನೀಡಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವೂ ಜಾಮೀನು ಅರ್ಜಿಯನ್ನು ಈ ಹಿಂದೊಮ್ಮೆ ವಜಾಗೊಳಿಸಿತ್ತು. ಇದೀಗ ಜನಪ್ರತಿನಿಧಿಗಳಿಂದ ಷರತ್ತು ಬದ್ದ ಜಾಮೀನು ಸಿಕ್ಕಿದೆ.
ಸೂರಜ್ ರೇವಣ್ಣ ತಮ್ಮದೇ ಪಕ್ಷದ ಕಾರ್ಯಕರ್ತ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದರು ಎನ್ನಲಾಗಿದೆ. ಆತನ ನಂಬರ್ ತೆಗೆದುಕೊಂಡು ಅಸಭ್ಯವಾದ ಮೆಸೇಜ್ ಮಾಡುತ್ತಾ, ಒಮ್ಮೆ ಭೇಟಿಗೆಂದು ಕರೆದು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ಈ ಸಂಬಂಧ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಸೂರಜ್ ರೇವಣ್ಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ಇದೀಗ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ. ಕಿಡ್ನ್ಯಾಪ್ ಕೇಸಲ್ಲಿ ರೇವಣ್ಣ ಕೂಡ ಒಂದಷ್ಟು ದಿನ ಜೈಲಲ್ಲಿ ಇದ್ದು ಬಂದಿದ್ದರು. ಇನ್ನು ಪ್ರಜ್ವಲ್ ರೇವಣ್ಣರಿಗೆ ಜಾಮೀನು ಸಿಗಬೇಕಿದೆ.