ವಿದೇಶಿ ಅಡಿಕೆ ಆಮದು : ಅಡಿಕೆ ಬೆಳೆಗಾರರಿಗೆ ಸಂಕಷ್ಟ..!
ಬೆಂಗಳೂರು: ನಮ್ಮ ರಾಜ್ಯದಲ್ಲಿಯೇ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಅಡಿಕೆ ಬೆಲೆಗೆ ಮೊದಲೇ ಹೆಚ್ಚಿನ ಬೆಲೆ ಸಿಗುತ್ತಿಲ್ಲ ಎಂಬ ಬೇಸರವಿದೆ. ಮಾರುಕಟ್ಟೆಯಲ್ಲಿ 55 ಸಾವಿರಕ್ಕೆ ತಲುಪಿದ್ದ ಬೆಲೆ ದಿಢೀರನೆ ಮತ್ತೆ ಐದು ಸಾವಿರಕ್ಕೆ ಇಳಿದಿದೆ. ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದಾನೇ ರೈತರು ಕಾಯುತ್ತಿದ್ದಾರೆ. ಹೀಗಿರುವಾಗ ವಿದೇಶಿ ಅಡಿಕೆ ಅಕ್ರಮವಾಗಿ ದೇಶದ ಒಳಗೆ ಆಮದಾದರೆ ಅಡಿಕೆ ಬೆಳೆಗಾರರ ಪರಿಸ್ಥಿತಿ ಏನಾಗಬೇಡ..?
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ಸಚಿವ ಜಿತಿನ್ ಪ್ರಸಾದ್ ಈ ಸಂಬಂಧ ರಾಜ್ಯಸಭೆಯಲ್ಲಿ ಸದಸ್ಯ ಡಿ.ವಿರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಮೂರು ತಿಂಗಳಲ್ಲಿ 84 ಅಕ್ರಮ ಆಮದಿನ ಪ್ರಕರಣಗಳು ದಾಖಲಾಗಿವೆ. ಅಂದ್ರೆ ಪ್ರರಿ ದಿನ ಸರಾಸರಿ ಒಂದು ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಕೇಸನ್ನು ಪತ್ತೆ ಮಾಡಲಾಗಿದೆ. ಇವುಗಳು ಬಯಲಿಗೆ ಬಂದಂತ ಪ್ರಕರಣಗಳಾಗಿವೆ. ಇನ್ನು ಬಯಲಿಗೆ ಬಾರದೆ ಡೀಲ್ ಆದ ಪ್ರಕರಣಗಳು ಅದೆಷ್ಟೋ..? ಡ್ರೈ ಫ್ರೂಟ್ಸ್ ಹೆಸರಿನಲ್ಲಿ ಅಥವಾ ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ನೆಪದಲ್ಲಿ ಆಮದಾಗಿರುವ ಅಡಿಕೆಗಳು ಅದೆಷ್ಟೋ..?
30,09,000 ಕೆ.ಜಿ! ಸರಾಸರಿ ಪ್ರತೀ ಕೆಜಿ ಅಡಿಕೆಗೆ ₹ 400 ಎಂದು ಪರಿಗಣಿಸಿದರೆ, ₹ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ! ಲೆಕ್ಕ ಸಿಗದೇ ಇರುವ ಅಕ್ರಮ ಅಡಿಕೆಯ ಮೌಲ್ಯ ಎಷ್ಟಿರಬಹುದು? ಖಂಡಿತವಾಗಿ ಅದು ಭಯಾನಕವಾದ ಮೊತ್ತವೇ ಆಗಿರುತ್ತದೆ. ಇಷ್ಟಕ್ಕೂ ಇದು ಮೂರು ತಿಂಗಳ ವ್ಯವಹಾರದ್ದು! ವರ್ಷ ಪೂರ್ತಿಗೆ ಎಷ್ಟಾಗಬಹುದು? 2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್ ವಶಪಡಿಸಿಕೊಳ್ಳಲಾಗಿದೆ. 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.