ಜೈಲಿನಿಂದ ರಿಲೀಸ್ ಆದ ಕೂಡಲೇ ಮನೆ ದೇವರಿಗೆ ಪೂಜೆ : ದರ್ಶನ್ ಹೆಸರಲ್ಲೂ ಅರ್ಚನೆ..!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಆರು ತಿಂಗಳ ಬಳಿಕ ರಿಲೀಸ್ ಆಗಿದ್ದಾರೆ. ಮಗಳು ಖುಷಿ ಹಾಗೂ ಪವಿತ್ರಾ ಗೌಡ ತಾಯೊಯ ಮೊಗದಲ್ಲಿ ಮಗಳು ಹೊರಗೆ ಬಂದ ಸಂತಸ ಮನೆ ಮಾಡಿದೆ. ಪವಿತ್ರಾ ಗೌಡ ಜೈಲಿನಿಂದ ಹೊರಗೆ ಬರುತ್ತಲೆ ಮೊದಲು ಮನೆ ದೇವರ ದರ್ಶನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಲಘಟ್ಟಪುರದ ವಜ್ರಮುನೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ತಲಘಟ್ಟಪುರದ ಈ ವಜ್ರಮುನೇಶ್ವರ ದೇವಸ್ಥಾನ ಪವಿತ್ರಾ ಗೌಡ ಅವರ ತಾಯಿಯ ಮನೆ ದೇವರಾಗಿದೆ. ಜೈಲಿನಿಂದ ಹೊರ ಬರುವುದಕ್ಕೂ ಮುನ್ನವೇ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಂತ ಮುನೇಶ್ವರ ಸ್ವಾಮಿ ದೇವರಿಗೂ ಪವಿತ್ರಾ ಅವರ ತಾಯಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಜೈಲಿನಿಂದ ನೇರವಾಗಿ ದೇವರ ದರ್ಶನಕ್ಕೆ ಹೋಗಿದ್ದಾರೆ. ಸಾಮಾನ್ಯವಾಗಿ ಇಂಥಹ ಕಷ್ಟದ ಸಮಯದಲ್ಲಿ ಮನೆ ದೇವರುಗಳಿಗೆ ಹರಕೆ ಮಾಡಿಕೊಂಡಿರುತ್ತಾರೆ. ಹೀಗಾಗಿ ಜೈಲಿನಿಂದ ರಿಲೀಸ್ ಆದ ಕೂಡಲೇ ಹರಕೆ ತೀರಿಸಿದ್ದಾರೆ ಎನಿಸುತ್ತದೆ.
ಪವಿತ್ರಾ ಕೂಡ ದೇವಸ್ಥಾನದ ಬಳಿ ಹೋದ ಕೂಡಲೇ ಅಲ್ಲಿಯೇ ಇದ್ದ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ಮಾಡಿದ್ದು, ದೇವರಿಗೆ ಪವಿತ್ರಾ ಗೌಡ ಅವರು ಪೂಜೆ ಮಾಡಿದ್ದಾರೆ. ಹೂ ಇಟ್ಟು ಹಣ್ಣು ಕಾಯಿ ಪ್ರಸಾದ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಗರ್ಭಗುಡಿಯಲ್ಲಿರುವ ಮುನೇಶ್ವರನಿಗೆ ವಿಶೇಷ ಪೂಜೆಯ ಜೊತೆಗೆ ಅರ್ಚನೆಯನ್ನು ಮಾಡಿಸಿದ್ದಾರೆ. ಈ ವೇಳೆ ಮನೆಯವರ ಹೆಸರೆಲ್ಲ ಹೇಳಿ ಮುಗಿಸಿದ ಮೇಲೆ ದರ್ಶನ್ ಅವರ ಹೆಸರಲ್ಲೂ ಅರ್ಚನೆ ಮಾಡಿಸಿರುವುದು ವಿಶೇಷ. ಸದ್ಯ ದರ್ಶನ್ ಕೋರ್ಟ್ ಗೆ ಹೋಗಿ ಸಹಿ ಹಾಕಿದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.