For the best experience, open
https://m.suddione.com
on your mobile browser.
Advertisement

ರಾಜ್ಯಾಧ್ಯಕ್ಷನ ಆಯ್ಕೆ ತಪ್ಪು ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲಿ : ಯತ್ನಾಳ್ ಗೆ ಪ್ರಹ್ಲಾದ್ ಜೋಶಿ ಕ್ಲಾಸ್

03:46 PM Dec 29, 2023 IST | suddionenews
ರಾಜ್ಯಾಧ್ಯಕ್ಷನ ಆಯ್ಕೆ ತಪ್ಪು ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲಿ   ಯತ್ನಾಳ್ ಗೆ ಪ್ರಹ್ಲಾದ್ ಜೋಶಿ ಕ್ಲಾಸ್
Advertisement

ದಾವಣಗೆರೆ: ಇತ್ತಿಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬುದ್ದಿ ಮಾತು ಹೇಳಿದ್ದಾರೆ. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎನಿಸದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲಿ ಎಂದು ಸಲಹೆ ನೀಡಿದ್ದಾರೆ.

Advertisement
Advertisement

ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಯಾವುದೇ ರೀತಿಯ ದೂರು, ದುಮ್ಮಾನಗಳಿದ್ದರೆ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸಬೇಕು. ಹೀಗೆ ಬಹಿರಂಗ ಹೇಳಿಕೆಗಳನ್ನು ಕೊಡುವವರಿಗೆ ನಾನು ಹೇಳುವುದು ಏನೆಂದರೆ, ಪಕ್ಷದ ಮೇಲೆ ಅಭಿಮಾನ, ಗೌರವ ಇದ್ದರೆ ಈ ರೀತಿ ಬಹಿರಂಗ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಇದು ಸೆಇ ಆಗಿರುವುದಿಲ್ಲ ಎಂದಿದ್ದಾರೆ.

Advertisement

ಯುವ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ, ರಾಷ್ಟ್ರೀಯ ಅಧಗಯಕ್ಷರು, ವರಿಷ್ಠರು, ಪ್ರಧಾನಿಯವರು ಕುಳಿತು, ಚರ್ಚೆ ಮಾಡಿನೇ ಆಯ್ಕೆ‌ ಮಾಡಿರುತ್ತಾರೆ. ಇದು ರಾಷ್ಟ್ರೀಯ ಘಟಕದ ನಿರ್ಣಯ. ಆದರೆ ನಿಮಗೆ ಇದು ಸರಿಯಾಗಬೇಕಿತ್ತು ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಸಂಪರ್ಕ ಮಾಡಿ. ಅದು ಬಿಟ್ಟು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಅವರು ಶಾಸಕರಿದ್ದಾರೆ. ಕರೆದು ಮಾತನಾಡುತ್ತೇನೆ ಎಂದಿದ್ದಾರೆ.

Advertisement
Advertisement

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ ಜೋಶಿ ಅವರು, 1971 ರಿಂದ ಗರಿಬಿ ಹಟಾವೋ ಎಂದು ಹೇಳಿದವರು ನೀವೂ. ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದ್ದೀರಿ. ಒಂದು ಗ್ಯಾಸ್ ಕೂಡ ಕೊಡಲು ಆಗಲಿಲ್ಲ. ಮನೆ ಕೂಡ ಕೊಡಲು ಆಗಲಿಲ್ಲ ಎಂದು ಗರಂ ಆಗಿದ್ದಾರೆ.

Advertisement
Tags :
Advertisement