Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಕೆ ಶಿವಕುಮಾರ್ ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ : ಯತೀಂದ್ರ ಸಿದ್ದರಾಮಯ್ಯ ಮಾತಿಗೆ ಪ್ರತಾಪ್ ಸಿಂಹ ವಾಗ್ದಾಳಿ

01:54 PM Jan 17, 2024 IST | suddionenews
Advertisement

 

Advertisement

 

ಮೈಸೂರು: ಇಂದು ಬೆಳಗ್ಗೆಯಿಂದ ರಾಜ್ಯ ರಾಜಕಾರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಮಾತೇ ಓಡಾಡುತ್ತಿದೆ, ಚರ್ಚೆಗೆ ಗ್ರಾಸವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ವಿಚಾರಕ್ಕೆ ಸಂಸದ ಪ್ರತಾಪ್ ಅಇಂಹ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.

Advertisement

 

'ಸಿದ್ದರಾಮಯ್ಯ ಅವರು ತಮ್ಮ ಮಗನ ಮೇಲೆ ಬಂದೂಕು ಇಟ್ಟು ಡಿಕಡ ಶಿವಕುಮಾರ್ ಅವರ ಎದೆಗೆ ಗುಂಡು ಹೊಡೆಯುತ್ತಿದ್ದಾರೆ. ಈ ಮೊದಲು ಎಂ ಬಿ ಪಾಟೀಲ್ ಬಾಯಿಂದ ಐದು ವರ್ಷ ತಾನೇ ಸಿಎಂ ಎಂದು ಹೇಳಿಸಿದ್ದರು. ನಂತರ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಕೆ ಎನ್ ರಾಜಣ್ಣ ಕಡೆಯಿಂದ ಹೇಳಿಕೆಯನ್ನು ಕೊಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷ ಸಿಎಂ ಅಂತಾನೂ ಹೇಳಿದ್ದರು. ಈಗ ಮಗನ ಮೂಲಕ ಹೇಳಿಸುತ್ತಾ ಇದ್ದಾರೆ.

 

ಇವತ್ತು ಸಿಎಂ ಪುತ್ರ ಡಾ.ಯತೀಂದ್ರ ಅವರು ಹಾಸನದಲ್ಲಿ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ನಮ್ಮ ಸಮುದಾಯದವರು, ಮುಸಲ್ಮಾನರು ಸಹಕಾರ ನೀಡಿದ್ದರಿಂದ ಸರ್ಕಾರ ಬಂತು ಅಂತ ಹೇಳಿದ್ದಾರೆ. ನಮಗೆ ಸ್ವಜಾತಿಯವರು, ಮುಸಲ್ಮಾನರು ಮುಖ್ಯ ಎಂಬ ಸಂದೇಶ ನೀಡಿದ್ದಾರೆ‌. ಹಾಗಾದರೆ ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರು, ವರುಣಾದಲ್ಲಿ ಲಿಂಗಾಯತರು ಮತ ನೀಡದೆ ಕಾಂಗ್ರೆಸ್ ಬಂತಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೊ ಪಾಪ ಅನ್ನಿಸುತ್ತದೆ. ಎಸ್ ಎಂ ಕೃಷ್ಣ ಅವರ ಬಳಿಕ ಮತ್ತೊಮ್ಮೆ ಸಿಎಂ ಆಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಅಂತ ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಪ್ರಚಾರ ಮಾಡಿದ್ದರು. ಒಕ್ಕಲಿಗರ ಮನೆ ಮನೆಗೆ ಹೋಗಿ ವೋಟ್ ಕೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ನಾಯಕತ್ವ ವಹಿಸಿ ಚುನಾವಣೆಗೆ ಬಂಡವಾಳವನ್ನೂ ಹಾಕಿದ್ದರು. ಈ ಕಾರಣಕ್ಕಾಗಿಯೇ ಎರಡೂವರೆ ವರ್ಷದ ಬಳಿಮ ಸಿಎಂ ಆಗುವ ಭರವಸೆಯೂ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆ ಎಂದಿದ್ದಾರೆ.

Advertisement
Tags :
bengalurudk shivakumarPratap simhasuddioneYathindra Siddaramaiahಡಿಕೆ ಶಿವಕುಮಾರ್ಪ್ರತಾಪ್ ಸಿಂಹಬೆಂಗಳೂರುಯತೀಂದ್ರ ಸಿದ್ದರಾಮಯ್ಯವಾಗ್ದಾಳಿಸುದ್ದಿಒನ್
Advertisement
Next Article