ಗೋಬಿಗೆ ಈ ಕೆಮಿಕಲ್ ಹಾಕಿದ್ರೆ ಬೀಳುತ್ತೆ 10 ಲಕ್ಷ ದಂಡ.. 7 ವರ್ಷ ಜೈಲು..!
ಬೆಂಗಳೂರು: ಈಗಂತೂ ಜಗತ್ತೇ ಉದ್ಯಮಮಯವಾಗಿದೆ. ತಿನ್ನುವ ಆಹಾರವೆಲ್ಲಾ ಕೆಮಿಕಲ್ ಮಯವಾಗಿದೆ. ಏನನ್ನೇ ತಿಂದರು ಅದು ಮುಂದಿನ ದಿನಗಳಲ್ಲಿ ಅನಾರೋಗ್ಯಕ್ಕೇನೆ ಕಾರಣವಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗುವಂತ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಕೆಲವೆಡೆ ಈಗಾಗಲೇ ಗೋಬಿಯನ್ನು ನಿಷೇಧ ಮಾಡಲಾಗಿದೆ. ರಾಜ್ಯದಲ್ಲೂ ಗೋಬಿ ನಿಷೇಧ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇದೀಗ ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ರಾಜ್ಯ ಸರ್ಕಾರ ನಿಷೇಧ ಮಾಡದೆ ಬಣ್ಣ ಬಳಕೆಯನ್ನ ಬ್ಯಾನ್ ಮಾಡೋಕೆ ಮುಂದಾಗಿದೆ. ಗೋಬಿ, ಕಾಟನ್ ಕ್ಯಾಂಡಿ ಮಾರಾಟಗಾರರಿಗೆ ಖಡಕ್ ಆಗಿ ಆ ಎರಡು ಪದಾರ್ಥಗಳನ್ನ ಬಳಸದಂತೆ ವಾರ್ನಿಂಗ್ ಕೊಟ್ಟಿದೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೃತಕ ಬಣ್ಣ ಬಳಕೆ ಮಾಡಿದ ಕಾಟನ್ ಕ್ಯಾಂಡಿ, ಗೋಬಿಯನ್ನ ಮಾತ್ರ ನಿಷೇಧ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
ಗೋಬಿ ಮಂಚೂರಿಯ ಒಟ್ಟು 171 ಮಾದರಿಗಳನ್ನ ಸಂಗ್ರಹ ಮಾಡಲಾಗಿದ್ದು, ಅದ್ರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣದ ಅಂಶ ಪತ್ತೆಯಾಗಿದೆ. ಕೃತಕ ಬಣ್ಣ ಮಾದರಿ ಪುಡ್ ಸೇಫ್ಟಿ ಆ್ಯಕ್ಟ್ ಪ್ರಕಾರ ಅಸುರಕ್ಷಿತ. 2011ರ ನಿಯಮದ ಪ್ರಕಾರ ಗೋಬಿಗೆ ಬಣ್ಣ ಬಳಸುವಂತಿಲ್ಲ. ಕಲರ್ ಹಾಕಿರುವ ಕಾಟನ್ ಕ್ಯಾಂಡಿ ಮಾರಾಟಕ್ಕೆ ನಿಷೇಧವಿದೆ. ರೋಡಮೈನ್-ಬಿ ಬಳಕೆ ಮಾಡ್ತಿರೋದು ವರದಿಯಲ್ಲಿ ಬೆಳಕಿಗೆ ಬಂದಿದ್ದು, ಕೃತಕ ಬಣ್ಣ ಹಾಕಿರೋ ಗೋಬಿ ಮಂಚೂರಿ ಮಾರಾಟವನ್ನ ನಿರ್ಬಂಧಿಸಲಾಗಿದ್ದು, ನಿಯಮ ಮೀರಿದ್ರೆ 10 ಲಕ್ಷ ದಂಡ, 7 ವರ್ಷ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.