ಮೊಬೈಲ್ ನಲ್ಲಿ Cashexpand-U ಅಪ್ಲಿಕೇಷನ್ ಇದ್ದರೆ ಕೂಡಲೇ ಡಿಲೀಟ್ ಮಾಡಿ : ಸರ್ಕಾರದಿಂದ ಎಚ್ಚರಿಕೆಯ ಸಂದೇಶ..!
ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಸಿಕ್ಕಾಪಟ್ಟೆ ಜಾಸ್ತಿಯಾಗ್ತಾ ಇದೆ. ಒಂದು ಸೆಕೆಂಡ್ ಯಾಮಾರಿದರು ಅಕೌಂಟ್ ನಲ್ಲಿ ಇರುವ ಹಣ ಪಕ್ಕನೇ ಮಾಯವಾಗಿ ಬಿಡುತ್ತದೆ. ಸೈಬರ್ ಕ್ರೈಂಗೆ ದೂರು ನೀಡಿದರು ಆ ಹಣ ಮರಳಿ ಪಡೆಯುವುದು ಕಷ್ಟ ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರದಿಂದಾನೇ ಕೆಲವೊಂದು ಆ್ಯಪ್ ಗಳ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಈಗಂತೂ ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಇರುವ ಕಾರಣ ಸೈಬರ್ ಕಳ್ಳರ ಕೆಲಸ ಸುಲಭವಾಗಿದೆ. ನಿಮ್ಮ ಮೊಬೈಲ್ ನಲ್ಲೂ ಇಂಥದ್ದೊಂದು ಆ್ಯಪ್ ಇದ್ದರೆ ಕೂಡಲೇ ಡಿಲೀಟ್ ಮಾಡಿ. ಅದರಿಂದಾನೇ ಹಣ ಕಳೆದುಕೊಳ್ಳುವ ಆತಂಕವಿದೆ. CashExpand-U ಎಂಬ ಅಪ್ಲಿಕೇಷನ್ ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಅದನ್ನು ಕೂಡಲೇ ಡಿಲೀಟ್ ಮಾಡಿ ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಅಉತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್ ದೋಸ್ತ್ ಎಚ್ಚರಿಕೆಯನ್ನು ನೀಡಿದೆ.
ಇಂಥ ಫೈನ್ಯಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್ ಗಳ ಬಗ್ಗೆ ಎಚ್ಚರವಾಗಿರಿ ಎಂದು ತಿಳಿಸಿದ್ದಾರೆ. ಈಗಾಗಲೇ ಈ ಅಪ್ಲಿಕೇಷನ್ ಅನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಗೂಗಲ್ ಪೇನಲ್ಲಿ ಈ ಅಪ್ಲಿಕೇಷನ್ ಲಭ್ಯವಿಲ್ಲ. ತೆಗೆದು ಹಾಕಲಾಗಿದೆ. ಈ ಅಪ್ಲಿಕೇಷನ್ ಆನ್ ಲೈನ್ ನಲ್ಲಿಯೇ ಮಾಹಿತಿ ಪಡೆದು ಸಾಲ ಸೌಭ್ಯವನ್ನು ಒದಗಿಸುತ್ತಾ ಇತ್ತು. ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಷನ್ ಇದ್ದರೆ ತಕ್ಷಣ ಡಿಲೀಟ್ ಮಾಡಿ. ಸೈಬರ್ ಕಳ್ಳರು ಯಾವಾಗ ಹೇಗೆ ಹಣ ದೋಚುತ್ತಾರೋ ಗೊತ್ತಾಗುವುದಿಲ್ಲ.