Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಒಂದೇ ಒಂದು ಕರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ ಹಾಕ್ತಾರೆ.. ಆದರೆ : ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು..?

12:34 PM Dec 12, 2024 IST | suddionenews
Advertisement

ಬೆಳಗಾವಿ: ಚಳಿಗಾಲದ ಅಧಿವೇಶನದ ನಡುವೆ ಬೃಹತ್ ಮಟ್ಟದ ಪ್ರತುಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಲಾಠಿ ಚಾರ್ಜ್ ನಡೆದಿದ್ದು, ಎಫ್ಐಆರ್ ಕೂಡ ದಾಖಲಾಗಿದೆ‌. ಇದನ್ನು ವಿರೋಧಿಸಿ ಇಂದು ಕೂಡ ಪಂಚಮಸಾಲಿ ಸಮುದಾಯದವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಬಸವಮೃತ್ಯುಂಜಯ ಸ್ವಾಮೀಜಿ ಅವರು, ಇವತ್ತು ಸ್ವಇಚ್ಛೆಯಿಂದ ಪ್ರತಿ ಹಳ್ಳಿಯಲ್ಲಿ ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಪ್ರತಿ ತಾಲೂಕಿನ ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಪ್ರತಿ ಜಿಲ್ಲೆ.. ರಾಷ್ಟ್ರೀಯ ಹೆದ್ದಾರಿಗಳನ್ನ ಸ್ವಯಂ ಸ್ಪೂರ್ತಿಯಿಂದ ಬಂದ್ ಮಾಡಿದ್ದಾರೆ. ಹತ್ತು ಲಕ್ಷ ಸಂಖ್ಯೆಯಲ್ಲಿ ಜನ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದಾರೆ. ನಮ್ಮೆಲ್ಲ ಜನರಿಗೆ ಹೇಳುವುದಕ್ಕೆ ಇಷ್ಟಪಡುತ್ತೀನಿ, ಶಾಂತಿಯುತವಾಗಿ ಹೋರಾಟ ಮಾಡೋಣಾ. ಯಾವುದೇ ಆಂಬುಲೆನ್ಸ್ ಗೆ ತೊಂದರೆಯಾಗಬಾರದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹೋರಾಟ ಮಾಡೋಣಾ. ಯಾವುದೇ ಕಾರಣಕ್ಕೂ ಉದ್ರೇಕಕ್ಕೆ ಒಳಗಾಗಬಾರದು. ನಿಮ್ಮ ಕೂಗು ಒಂದೇ ಇರಬೇಕು, ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯದವರಿಗೆ ಕ್ಷಮೆ ಕೇಳಬೇಕು.

 

Advertisement

ಎಫ್ಐಆರ್ ಆಗಿರಯವ ದಾಖಲಾಗಿರುವುದನ್ನು ಹಿಂಪಡೆದುಕೊಳ್ಳಬೇಕು. ಇಂಥ ಕೆಲಸಕ್ಕೆ ಕುಮ್ಮಕ್ಕು ಕೊಟ್ಟ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಇಲ್ಲವಾದಲ್ಲಿ ಉದ್ದೇಶಪೂರ್ವಕವಾಗಿ ಲಿಂಗಾಯತರ ಮೇಲೆ ಹಲ್ಲೆ ಮಾಡಿರುವ ಅಪಕೀರ್ತಿಗೆ ನೀವೂ ಪಾತ್ರರಾಗುತ್ತೀರಿ‌. ಈಗಲೇ ಒಂದು ಕರೆ ಕೊಟ್ಟರೆ ಒಂದು ಲಕ್ಷಕ್ಕೂ ಅಧಿಕ ಪಂಚಮಸಾಲಿ ಸಮುದಾಯದವರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ. ಆದರೆ ಆ ತಾಳ್ಮೆಯನ್ನು ಕಳೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಬಸವಣ್ಣನವರ ಸಿದ್ಧಾಂತವನ್ನ ಪಾಲನೆ ಮಾಡುತ್ತಿದ್ದೀವಿ. ಆದರೆ ಪಂಚಮಸಾಲಿ ಸಮುದಾಯದವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅನ್ನ ಕೊಡುವ ರೈತರ ಮೇಲೆ ಲಾಠಿ ಚಾರ್ಜ್ ನಡೆದಿದೆ. ನಾವೇನು ಅಂದುಕೊಂಡ್ವಿ ಅವತ್ತು ಎಸ್ಎಂ ಕೃಷ್ಣ ಅವರ ನಿಧನ ಸುದ್ದಿ‌ ಕೇಳಿ ಬೆಂಗಳೂರಿಗೆ ಹೋಗಿದ್ದಾರೆಂದುಕೊಂಡೆವು. ಆದರೆ ಮುಖ್ಯಮಂತ್ರಿಗಳು ಇಲ್ಲೆ ಇದ್ದರು ಎಂಬುದು ತಿಳಿದು ಬೇಸರವಾಯ್ತು ಎಂದಿದ್ದಾರೆ.

Advertisement
Tags :
bengaluruchitradurgaJayamruthyunjaya SwamijikannadaKannadaNewssuddionesuddionenewsvidhana soudhaಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಜಯಮೃತ್ಯುಂಜಯ ಸ್ವಾಮೀಜಿಬೆಂಗಳೂರುವಿಧಾನಸೌಧಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article