Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಈಗಲೇ ಚುನಾವಣೆಯಾದರೆ ಕಾಂಗ್ರೆಸ್ ಗೆ ಎಷ್ಟು ಲಾಭ..ಬಿಜೆಪಿಗೆ ಎಷ್ಟು ನಷ್ಟ: ಜಗದೀಶ್ ಶೆಟ್ಟರ್ ಹೇಳಿದ್ದೇನು..?

02:12 PM Nov 30, 2023 IST | suddionenews
Advertisement

ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿಗಳು ನಡೆಯುತ್ತಿವೆ. ತಮ್ನ ತಮ್ಮ ಪಕ್ಷಕ್ಕೆ ಪ್ರಭಾವಿಗಳನ್ನು ಬರ ಮಾಡಿಕೊಳ್ಳುವ ಕೆಲಸ ಕೂಡ ನಡೆಯುತ್ತಿದೆ. ಇದರ ನಡುವೆ ಜಗದೀಶ್ ಶೆಟ್ಟರ್, ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ಎಲ್ಲವೂ ಹದಗೆಟ್ಟು ಹೋಗಿದೆ. ಮುಂಬರುವ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸ್ಥಾನಗಳಿಂದ ಅವರು ಹೀನಾಯವಾಗಿ ಸೋಲು ಕಾಣುತ್ತಾರೆ ಎಂದಿದ್ದಾರೆ.

Advertisement

ಈ ಹಿಂದೆ 2018 ರಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭೆ ಚುನಾವಣಾ ನಡೆತು, ಆವಾಗ ಎಷ್ಟೇ ಗುದ್ದಾಡಿದರು ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ. ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರೋದಿಲ್ಲ. ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರ ಅಲ್ಲ ಯಾರೂ ಅಧ್ಯಕ್ಷ ಆದರೂ ಅದನ್ನು ಸರಿ ಮಾಡಲು ಆಗುವುದಿಲ್ಲ. ಇನ್ನು ಐದು ರಾಜ್ಯದ ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರಲಿದೆ ಎಂದಿದ್ದಾರೆ.

 

Advertisement

ಯಾವುದೇ ರಾಜಕೀಯ ಪಕ್ಷಗಳು ಕೊನೆಯ ಹಂತದವರಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಬಾರದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು. ಇದರಿಂದಾಗಿ ಅಭ್ಯರ್ಥಿಗಳು ಅತೀ ಹೆಚ್ಚು ಜನರನ್ನು ತಲುಪಬಹುದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳ್ಳೆಯದು ಎಂದಿದ್ದಾರೆ.

Advertisement
Tags :
BabgaloreBjpCongresshubliJagadesh shettarಎಷ್ಟು ನಷ್ಟಎಷ್ಟು ಲಾಭಕಾಂಗ್ರೆಸ್ಚುನಾವಣೆಜಗದೀಶ್ ಶೆಟ್ಟರ್ಬಡಂಗಳೂರುಬಿಜೆಪಿಹುಬ್ಬಳ್ಳಿ
Advertisement
Next Article