Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೃಷಿ ಖಾತೆ ಸಿಕ್ಕರೆ ರೈತರಿಗಾಗಿ ಕೆಲಸ ಮಾಡುತ್ತೇನೆ : ಕುಮಾರಸ್ವಾಮಿ

01:06 PM Jun 09, 2024 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಪಕ್ಷ ಸರಳ ಮತ ಪಡೆದು ಅಧಿಕಾರ ಹಿಡಿಯುವತ್ತ ಸಿದ್ಧವಾಗಿದೆ. ಇಂದು ನರೇಂದ್ರ ಮೋದಿಯವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಮೂರನೇ ಬಾರಿಗೆ ಪಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಗೆದ್ದಂತ ಸಂಸದರು ಕೂಡ ತೆರಳುತ್ತಿದ್ದಾರೆ.

Advertisement

ರಾಜ್ಯದ ಸಂಸದರಿಗೂ ಕೇಂದ್ರದಲ್ಲಿ ಸಚುವ ಸ್ಥಾನ ಸಿಗುವ ಆಶ್ವಾಸನೆ ಇದೆ. ಡಾ.ಮಂಜುನಾಥ್ ಅವರು ಮೊದಲ ಬಾರಿಗೆ ಅದರಲ್ಲೂ ಕನಕಪುರ ಬಂಡೆ ಎಂದೇ ಕರೆಯುವ ಡಿ.ಕೆ‌. ಸುರೇಶ್ ಅವರನ್ನೇ ಸೋಲಿಸಿದ್ದಾರೆ. ಹೀಗಾಗಿ ಅವರಿಗೂ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿದಾಗಲೇ ಕುಮಾರಸ್ವಾಮಿ ಅವರಿಗೆ ಕೇಂದ್ರದಿಂದ ಸ್ಥಾನ ಸಿಗುವ ಸಾಧ್ಯತೆ ಇದೆ‌ ಎಂದೇ ಹೇಳಲಾಗಿತ್ತು. ಅದರಂತೆ ಕುಮಾರಸ್ವಾಮಿ ಅವರು ಗೆದ್ದಿದ್ದಾರೆ. ಈಗ ಕೇಂದ್ರದಿಂದ ಸಚಿವರಾಗುವ ಎಲ್ಲಾ ಸಾಧ್ಯತೆಯೂ ಇದೆ.

ಈ ಬಗ್ಗೆ‌ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ನಮ್ಮ ಈ ಗೆಲುವು ಕರ್ನಾಟಕ ಜನತೆಗೆ ಸಲ್ಲಬೇಕು. ನರೇಂದ್ರ ಮೋದಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮೋದಿಯವರ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ಸಿಕ್ಕರೆ ಖಂಡಿತ ಜನರಿಗಾಗಿ ಕೆಲಸ ಮಾಡುತ್ತೇನೆ. ಕೃಷಿ ಖಾತೆ ಸಿಕ್ಕರೆ ಸಂತೋಷ. ಈ ಮೂಲಕ ರೈತರಿಗಾಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ರಾಜ್ಯದಲ್ಲಿ ಜೆಡಿಎಸ್ ಪುನಶ್ಚೇತನ ಸಿಕ್ಕಿದೆ. ಮೋದಿ ನೇತೃತ್ವದ ಸರ್ಕಾರ, ಕನ್ನಡಿಗರಿಂದ ಪುನಶ್ಚೇತನ ಸಿಕ್ಕಿದೆ. ವಿಶೇಷವಾಗಿ ನನ್ನ ಮಂಡ್ಯ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

Advertisement

Advertisement
Tags :
bangalorebengaluruchitradurgaH D KumaraswamyI will work for farmersKumaraswamysuddionesuddione newsಕುಮಾರಸ್ವಾಮಿಕೃಷಿ ಖಾತೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article