For the best experience, open
https://m.suddione.com
on your mobile browser.
Advertisement

ಮೂಡಾದಲ್ಲಿ ನಿವೇಶನ ಸಿಕ್ಕಿದ್ದರೆ ಅದನ್ನೆ ಅಪಪ್ರಚಾರ ಮಾಡುತ್ತಿದ್ದರು : ಕುಮಾರಸ್ವಾಮಿ

02:34 PM Jul 28, 2024 IST | suddionenews
ಮೂಡಾದಲ್ಲಿ ನಿವೇಶನ ಸಿಕ್ಕಿದ್ದರೆ ಅದನ್ನೆ ಅಪಪ್ರಚಾರ ಮಾಡುತ್ತಿದ್ದರು   ಕುಮಾರಸ್ವಾಮಿ
Advertisement

ಮೈಸೂರು: ಮೂಡಾ ಹಗರಣದ ವುಚಾರ ಈಗಲೂ ಚರ್ಚೆಯಾಗುತ್ತಲೇ ಇದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೂ ಕೂಡ ಮೂಡಾ ನಿವೇಶನ ಹಂಚಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದರ ಬೆನ್ನಲ್ಲೇ ಈಗ ಕುಮಾರಸ್ವಾಮಿ ಅವರು ಕ್ಲಾರಿಫಿಕೇಷನ್ ನೀಡಿದ್ದು, ಮೂಡಾದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. ನಿವೇಶನ ಸಿಗದೆ ಇರುವುದೇ ನನ್ನ ಅದೃಷ್ಟ ಎಂದಿದ್ದಾರೆ.

Advertisement

ಒಂದು ವೇಳೆ ನಿವೇಶನ ಮಂಜುರಾಗಿದ್ದಾರೆ ಅದನ್ನೇ ಅಪಪ್ರಚಾರ ಮಾಡಿ ಬಿಡುತ್ತಿದ್ದರು. 1984ರಲ್ಲಿ ಮೂಡಾದಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದೇನೆ. 37 ಸಾವಿರ ಹಣವನ್ನು ಕಟ್ಟಿದ್ದೇನೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಯಾರಿಗಾದರೂ ಹೇಳಿದ್ದರೆ ಮನೆಗೆ ಫೈಲ್ ತಂದು ಕೊಡುತ್ತಿದ್ದರು. ಆದರೆ ಆಗಲೂ ಪ್ರಭಾವ ಬಳಸಿ ನಾನು ನಿವೇಶನ ಪಡೆಯಲಿಲ್ಲ. ಮೂಡಾದಲ್ಲಿ ನಿವೇಶನ ಸಿಗದೆ‌ ಇರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಅದನ್ನೇ ದೊಡ್ಡದು ಮಾಡುತ್ತಿದ್ದರು. ಆದರೂ ಕಾಂಗ್ರೆಸ್ ನವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

ಮೂಡಾ ಹಗರಣದಿಂದ ಪಾರಾಗುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ದೇಸಾಯಿ ಆಯೋಗ್ ವರದಿಯನ್ನು ತಗೊಂಡು ನೆಕ್ಕಲು ಆಗುತ್ತದಾ..? ಪ್ರಕರಣದಿಂದ ಬಚಾವು ಆಗುವುದಕ್ಕೇನೆ ದೇಸಾಯಿ ಆಯೋಗ ನೇಮಕ ಮಾಡಿರುವುದು. ಈ ಸರ್ಕಾರ ಹಾಗೂ ಸಿದ್ದರಾಮಯ್ಯ ಒಂದು ಕ್ಷಣ ಮುಂದುವರೆಯಬಾರದು ಎಂಬುದೇ ನನ್ನ ಆಶಯ. ಸಿದ್ದರಾಮಯ್ಯ ಅವರ ಪತ್ನಿ ಐವತ್ತಲ್ಲ ನೂರು ನಿವೇಶನ ಪಡೆದುಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾನೂನಹ ಬದ್ಧವಾಗಿ ಪಡೆದುಕೊಳ್ಳಬೇಕು ಎಂಬುದು ನಮ್ಮ ವಾದ ಎಂದಿದ್ದಾರೆ.

Advertisement

Tags :
Advertisement