ಈಶ್ವರಪ್ಪ ಅವರು ಗುಂಡಿಟ್ಟು ಕೊಲ್ಲಲು ಬಂದರೆ ಎದೆಕೊಟ್ಟು ನಿಲ್ಲುತ್ತೇನೆ : ಡಿಕೆ ಸುರೇಶ್
ಬೆಂಗಳೂರು: ಸಂಸದ ಡಿಕೆ ಸುರೇಶ್, ಮಾಜಿ ಸಚಿವ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಆದಷ್ಟು ಬೇಗನೆ ಭೇಟಿಯಾಗುತ್ತೇನೆ. ಹೆದರಿ ಓಡುವ ಹೇಡಿ ನಾನಲ್ಲ. ಅವರು ಗುಂಡಿಕ್ಕಿ ಕೊಲ್ಲಲು ಬಂದರೆ, ನಾನು ಎದೆಕೊಟ್ಟು ನಿಲ್ಲುತ್ತೇನೆ. ನಾನೊಬ್ಬ ಸಂಸದ ಸದಸ್ಯ ಎನ್ನುವುದಕ್ಕಿಂತ ಕನ್ನಡಿಗ ಎಂಬ ಕಾರಣಕ್ಕೆ ಧ್ವನಿ ಎತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಹೇಡಿ ನಾನಲ್ಲ. ನಾನು ಓಡಿ ಹೋಗುವುದಿಲ್ಲ. ಈಶ್ಚರಪ್ಪನವರು ಕೊಲ್ಲಲು ಬಂದರೆ ಆ ಗುಂಡಿಗೆ ಎದೆ ಕೊಡುವವನು ನಾನು. ಅವರ ಮತ್ತು ನಮ್ಮ ನಡುವೆ ಯಾವುದೇ ರೀತಿಯ ಹಳೆಯ ದ್ವೇಷ ಇಲ್ಲ. ಈಶ್ವರಪ್ಪನವರು ಕೂಡ ಈ ರಾಜ್ಯಕ್ಕೆ ಅನೇಕ ಕೊಡುಗೆಯನ್ನು ನಾನಾ ಹಂತಗಳಲ್ಲಿ ನೀಡಿದ್ದಾರೆ. ಫುಲ್ ಸೆಟಲ್ಮೆಂಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು ಅಂತಾ ಈಶ್ವರಪ್ಪ ಅವರ ಬಳಿಯೇ ಕೇಳಬೇಕು. ಅವರೇ ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಾರೆ. ಆಗಾಗ ಅವರ ಬಾಯಲ್ಲಿ ನುಡಿಮುತ್ತುಗಳು ಬೀಳುತ್ತಾ ಇರುತ್ತೆ ಎಂದಿದ್ದಾರೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಡಿಕೆ ಬ್ರದರ್ಸ್ ಬಗ್ಗೆ ಇತ್ತಿಚೆಗೆ ಮಾತನಾಡಿದ್ದರು. ಡಿಕೆ ಸುರೇಶ್ ಅಂಥವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತನ್ನು ಹೇಳಿದ್ದರು. ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಕೂಡ ತಿರುಗೇಟು ನೀಡಿದ್ದರು. ಇದೀಗ ಡಿಕೆ ಸುರೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.