For the best experience, open
https://m.suddione.com
on your mobile browser.
Advertisement

ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ, ನಮ್ಮ ಹುಡುಗರು ಕೇಸರಿ ಶಾಲು, ಟೋಪಿ ಧರಿಸುತ್ತಾರೆ : ರೇಣುಕಾಚಾರ್ಯ

12:29 PM Dec 23, 2023 IST | suddionenews
ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ  ನಮ್ಮ ಹುಡುಗರು ಕೇಸರಿ ಶಾಲು  ಟೋಪಿ ಧರಿಸುತ್ತಾರೆ   ರೇಣುಕಾಚಾರ್ಯ
Advertisement

ದಾವಣಗೆರೆ: ರಾಜ್ಯ ಸರ್ಕಾರದ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವ ಹೇಳಿಕೆಗೆ ಇದೀಗ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ನಮ್ಮ ಹುಡುಗರು ಕೇಸರಿ ಶಾಲು, ಟೋಪಿ ಧರಿಸಿ ಬರುತ್ತಾರೆ ಎಂದೇ ಹೇಳಿದ್ದಾರೆ.

Advertisement
Advertisement

ಕರ್ನಾಟಕದಲ್ಲಿ ಟಿಪ್ಪು, ತುಘಲಕ್ ಸರ್ಕಾರವಿದೆ. ಅನುಭವಿ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧ ಮಾಡಿರುವ ಆದೇಶವನ್ನು ಹಿಂಪಡೆಯುತ್ತೇವೆ ಎಂದಿದ್ದಾರೆ. ಒಂದು ವರ್ಗವನ್ನು ಒಲೈಸಲು ಈ ರೀತಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತವೆ ಎಂದಿದ್ದಾರೆ.

Advertisement

Advertisement
Advertisement

ಹಿಜಾಬ್ ಧರಿಸಲು ಅವರಿಗೆ ಅವಕಾಶ ನೀಡಿದರೆ ಕೇಸರಿ ಶಾಲು ಹಾಗೂ ಟೋಪಿ ಧರಿಸಲು ನಮಗೂ ಅವಕಾಶ ನೀಡಬೇಕು. ಬಟ್ಟೆ, ಊಟ ನಮ್ಮ ಹಕ್ಕು ಆದರೆ, ಶಾಲಾ - ಕಾಲೇಜುಗಳಲ್ಲಿ ಸಮವಸ್ತ್ರ ಇರಬೇಕು. ನಮ್ಮ ಹುಡುಗರಿಗೆ ಕೇಸರಿ ಶಾಲು ಧರಿಸಿ ಬರುವುದಕ್ಕೆ ನಾನೇ ಹೇಳುತ್ತೀನಿ. ನಮ್ಮ ಸರ್ಕಾರ ಹಿಜಾಬ್ ಧರಿಸುವುದನ್ನು ನಿಷೇಧ ಮಾಡಿತ್ತು. ಇದನ್ನು ಪ್ರಶ್ನಿಸಿ ಕೋರ್ಟ್ ಗೂ ಹೋಗಿದ್ದರು.

ನೀವೂ ಒಂದು ವರ್ಗದ ಮುಖ್ಯಮಂತ್ರಿ ಅಲ್ಲ. ಹಿಜಾಬ್ ಆದೇಶ ವಾಪಸ್ ಪಡೆದು ಸಂಘರ್ಷಗಳಾದರೆ ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿಗಳೇ ಆಗುತ್ತಾರೆ. ರಾಜ್ಯದಲ್ಲಿ ಕೋಮು ಗಲಭೆಯಾದರೆ ಅದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ. ಭೀಕರ ಬರಗಾಲದ ವುಚಾರವನ್ನು ಮರೆಮಾಚುವುದಕ್ಕೆ ರಾಜ್ಯ ಸರ್ಕಾರ ಇದೀಗ ಹಿಜಾಬ್ ವಿಚಾರವನ್ನು ಚಾಲ್ತಿಗೆ ತಂದಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement
Tags :
Advertisement