Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

16 ರಾಷ್ಟ್ರಗಳು ಒಪ್ಪಿದರೆ ಅಮಿತ್ ಶಾ ಮಗ ಅಧ್ಯಕ್ಷರಾಗಲಿದ್ದಾರಂತೆ..!

07:03 PM Aug 21, 2024 IST | suddionenews
Advertisement

ನವದೆಹಲಿ: ಕೇಂದ್ರ ಗೃಹಮಂತ್ರಿ ಪುತ್ರ ಅಮಿತ್ ಶಾ ಪುತ್ರ ಜೈಶಾ ಸದ್ಯಕ್ಕೆ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ. ಆದರೆ ಇದೀಗ ಅದೃಷ್ಟ ಖುಲಾಯಿಸಿದ್ದು ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಆದರೆ ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ. 16 ರಾಷ್ಟ್ರಗಳು ಜೈ ಶಾ ಪರವಾಗಿ ಮತ ಹಾಕಿದರೆ ಐಸಿಸಿ ಅಧ್ಯಕ್ಷರಾಗುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ.

Advertisement

ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ. ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಅವರ ಜಾಗಕ್ಕೆ ಅಮಿತ್ ಶಾ ಅವರ ಪುತ್ರ ಜೈ ಶಾ ಅವರ ಹೆಸರು ಕೇಳಿ ಬರುತ್ತಿದೆ.

ಇನ್ನು ಮತದಾನದ ಹಕ್ಕು ಹೊಂದಿರುವ ಹದಿನಾರು ರಾಷ್ಟ್ರಗಳು ಕೂಡ ಜೈ ಶಾ ಅವರಿಗೆ ಬೆಂಬಲ ನೀಡಿವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶ ಈಗಾಗಲೇ ಬೆಂಬಲ ಘೋಷಿಸಿವೆ. ಇನ್ನುಳಿದ ರಾಷ್ಟ್ರಗಳು ಜೈ ಶಾ ಅವರಿಗೆ ಮತದಾನ ಮಾಡಿದರೆ ಐಸಿಸಿ ಅಧ್ಯಕ್ಷರಾಗುವುದು ಖಚಿತ. ಈಗಾಗಲೇ ಬಿಸಿಸಿಐನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೃಷ್ಟ ಚೆನ್ನಾಗಿದ್ದರೆ ಎಲ್ಲಾ ದೇಶಗಳು ಮತ ಹಾಕಿದರೆ ಜೈ ಶಾ ಐಸಿಸಿ ಅಧ್ಯಕ್ಷರಾಗುತ್ತಾರೆ. ಇನ್ನು ಜೈ ಶಾ ಅವರಿಗೆ 35 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಬಹಳ ದೊಡ್ಡ ದೊಡ್ಡ ಹುದ್ದೆಗೆ ಸೇರಿದ ಕೀರ್ತಿ ಅವರದ್ದಾಗುತ್ತದೆ.

Advertisement

Advertisement
Tags :
16 countries16 ರಾಷ್ಟ್ರAmit ShahAmit Shah's sonbecome presidentbengaluruchitradurgasuddionesuddione newsಅಮಿತ್ ಶಾಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article