Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ಖಡಕ್ ಎಚ್ಚರಿಕೆ : ಪಿಒಕೆಯಲ್ಲಿ ಟ್ರೋಫಿ ಪ್ರದರ್ಶನವಿಲ್ಲ..!

05:31 PM Nov 16, 2024 IST | suddionenews
Advertisement

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿದಿನ ಹೊಸದೊಂದು ಕ್ಯಾತೆ ತೆಗೆದು ಬಿಸಿಸಿಐ ವಿರುದ್ಧ ತನ್ನ ಹೇಳಿಕೆಯನ್ನು ನೀಡುತ್ತಲೆ ಇದೆ. ಚಾಂಪಿಯನ್ ಟ್ರೋಪಿಯ ಪ್ರದರ್ಶನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್ಪಡಿಸಿತ್ತು. ಆದರೆ ಇದಕ್ಕರ ಐಸಿಸಿ ಕಡಿವಾಣ ಹಾಕಿದೆ. ಚಾಂಪಿಯನ್ ಟ್ರೋಫಿಯನ್ನು ಪಿಒಕೆಗೆ ಕೊಂಡೊಯ್ಯದಂತೆ ಐಸಿಸಿ ಸೂಚನೆ ನೀಡಿದೆ. ಐಸಿಸಿ ಖಡಕ್ ಎಚ್ಚರಿಕೆಗೆ ಹೆದರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಿಒಕೆಯಲ್ಲಿ ಚಾಂಪಿಯನ್ ಟ್ರೋಫಿ ಪ್ರದರ್ಶಿಸುವ ನಿರ್ಧಾರವನ್ನು ಕೈಬಿಟ್ಟಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಟ್ರೋಫಿ ಟೂರ್ನಿ ಆಯೋಜಿಸುವ ಪಿಸಿಬಿ ಕಲ್ಪನೆಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಆಕ್ಷೇಪ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನಗರದಲ್ಲಿ, ಹೊಗಿನ ಕ್ರೀಡಾಂಗಣದಲ್ಲಿ, ಮಾಲ್ ನಲ್ಲಿ ಇವೆಂಟ್ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ ಪಿಒಕೆಯಲ್ಲಿ ಮಾತ್ರ ಟ್ರೋಫಿ ಪ್ರದರ್ಶನಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಜೈ ಶಾ ಐಸಿಸಿಗೆ ತಿಳಿಸಿದ್ದರು‌ ಜೈ ಶಾ ಅವರ ಮನವಿಯನ್ನು ಪುರಸ್ಕರಿಸಿದ ಐಸಿಸಿ ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೆ ಖಡಕ್ ಎಚ್ಚರಿಕೆ ನೀಡಿದೆ.

Advertisement

ಚಾಂಪಿಯನ್ ಟ್ರೋಫಿಯ ಪ್ರದರ್ಶನವನ್ನು ಪಾಕಿಸ್ತಾನದ ಯಾವ್ಯಾವ ನಗರಗಳಲ್ಲಿ ನಡೆಸಬೇಕು ಎಂಬುದರ ಬಗ್ಗೆ ಪಿಸಿಬಿ, ಐಸಿಸಿಯೊಂದಿಗೆ ಚರ್ಚೆ ನಡೆಸುತ್ತಿದೆ. ಈ ಮೂಲಕ ಐಸಿಸಿ ತೆಗೆದುಕೊಳ್ಳುವ ಅಂತಿಮ ನಿರ್ಧಾರದಂತೆ ಚಾಂಪಿಯನ್ ಟ್ರೋಫಿಯ ಪ್ರದರ್ಶನವಾಗಲಿದೆ. ಐಸಿಸಿ ವೇಳಾಪಟ್ಟಯನ್ನು ಬಿಡುಗಡೆ ಮಾಡಿದ್ದು ಅದರಂತೆಯೇ ಪ್ರದರ್ಶನವಾಗಲಿದೆ. ನವೆಂಬರ್ 16 ರಿಂದ 2025ರ ಜನವರಿ 26ರ ತನಕವೂ ಟ್ರೋಫಿ ಟೂರ್ನಿ ನಡೆಯಲಿದೆ. ಅದರಲ್ಲು ಏಳು ದೇಶಗಳು ಸೇರಿದ್ದು, ಭಾರತದಲ್ಲೂ ಟ್ರೋಫಿ ಟೂರ್ನಿ ನಡೆಯಲಿದೆ. ನಂತರ ಪಂದ್ಯಾವಳಿಯ ಆತಿಥೇಯ ಪಾಕಿಸ್ತಾನಕ್ಕೆ ಟ್ರೋಫಿ ಹಿಂದಿರುಗಲಿದೆ‌.

Advertisement
Advertisement
Tags :
bengaluruchitradurgaICC Khadak warningkannadaKannadaNewsNo trophy exhibition in PoKPakistan Cricket Boardsuddionesuddionenewsಐಸಿಸಿ ಖಡಕ್ ಎಚ್ಚರಿಕೆಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಟ್ರೋಫಿ ಪ್ರದರ್ಶನವಿಲ್ಲಪಾಕಿಸ್ತಾನ ಕ್ರಿಕೆಟ್ ಮಂಡಳಿಪಿಒಕೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article