Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾನು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಮಾತನಾಡುವುದಿಲ್ಲ : ರಮೇಶ್ ಜಾರಕಿಹೊಳಿ ಹಿಂಗಂದಿದ್ಯಾಕೆ..?

03:20 PM Jul 30, 2024 IST | suddionenews
Advertisement

 

Advertisement

ಬೆಳಗಾವಿ: ಮೂಡಾ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಶನಿವಾರ ಪಾದಯಾತ್ರೆ ನಡೆಸುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಯೂ ನಡೆದಿದೆ. ಇದರ ನಡುವೆ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅಸಮಾಧಾನ. ವ್ಯಕ್ತಪಡಿಸಿದ್ದಾರೆ‌. ನಾನು ಅವರ ಜೊತೆಗೆ ಮಾತನಾಡುವುದಿಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷರನ್ನು ಒಪ್ಪಿಲ್ಲ ಎಂದೇ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ನಮ್ಮ ಹೈಕಾಂಡ್ ಗೆ ನಾವೂ ಮೂಡಾ ಜೊತೆಗೆ ಬಳ್ಳಾರಿ ಪಾದಯಾತ್ರೆ ಮಾಡುವುದಕ್ಕೂ ಅನುಮತಿ ಕೇಳುತ್ತೇವೆ. ನಾವೂ ಪಾದಯಾತ್ರೆ ಕುರಿತು ರಾಜ್ಯಾಧ್ಯಕ್ಷರ ಬಳಿ ಕೇಳಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ. ಅದಕ್ಕಿಂತಲೂ ಮುಂಚಿತವಾಗಿ ದೆಹಲಿ ಹೈಕಮಾಂಡ್ ನಾಯಕರಿಗೆ ಮನವಿ ಮಾಡುತ್ತೇನೆ. ಮೂಡಾಗಿಂತಲೂ ವಾಲ್ಮೀಕಿ ಹಗರಣ ದೊಡ್ಡದಿದೆ. ಅದನ್ನು ಖಂಡಿಸಿ ಬಳ್ಳಾರಿ ಪಾದಯಾತ್ರೆಗೆ ಅವಕಾಶ ನೀಡುವಂತ ಮನವಿ ಮಾಡುತ್ತೇನೆ ಎಂದಿದ್ದಾರೆ.

Advertisement

ಮೈಸೂರು ನಗಾರಾಭಿವೃದ್ದಿಗಿಂತ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಗಳು ಬಹಳ ದೊಡ್ಡದು. ವಾಲ್ಮೀಕಿ ಹಗರಣ ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಸಿದ್ದರದ್ದೇವೆ‌. ಮೂಡಾ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಪಾದಯಾತ್ರೆ ಮೈಸೂರಿಗೆ ಸೀಮಿತ ಮಾಡಬಾರದು. ರಾಜ್ಯದಲ್ಲಿ ವಾಲ್ಮೀಮಿ ಜನಾಂಗ ದೊಡ್ಡದಿದೆ. ನಮ್ಮ ಜನಾಂಗಕ್ಕೆ‌ ಮೋಸ ಮಾಡಿರುವ ಸರ್ಕಾರ್ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಬೇಕಿದೆ. ನಾನೇ ಹೈಕಮಾಂಡ್ ಅನುಮತಿಯನ್ನು ಕೇಳುತ್ತೇನೆ. ನಾನು ಹಾಗೂ ಯತ್ನಾಳ್ ಇನ್ನಷ್ಟು ಕಾರ್ಯಕರ್ತರನ್ನು ಸೇರಿಸಿಕೊಂಡು ಕೂಡಲ ಸಂಗಮದಿಂದ ಪಾದಯಾತ್ರೆ ಮಾಡುತ್ತೇವೆ ಎಂದು ಮಾಜಿ ಸಚುವ ರಮೇಶ್ ಜಾರಕಿಹೊಳಿ ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ.

Advertisement
Tags :
bengaluruBjpchitradurgaramesh jarakiholiState Presidentsuddionesuddione newsswallowಚಿತ್ರದುರ್ಗಬಿಜೆಪಿಬೆಂಗಳೂರುರಮೇಶ್ ಜಾರಕಿಹೊಳಿರಾಜ್ಯಾಧ್ಯಕ್ಷಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article