For the best experience, open
https://m.suddione.com
on your mobile browser.
Advertisement

ಸಂಸತ್ ಪ್ರವೇಶಿಸಿ, ಮೋದಿ ಪರ ಕೈ ಎತ್ತುತ್ತೇನೆ : ಕೆ ಎಸ್ ಈಶ್ವರಪ್ಪ

03:55 PM May 07, 2024 IST | suddionenews
ಸಂಸತ್ ಪ್ರವೇಶಿಸಿ  ಮೋದಿ ಪರ ಕೈ ಎತ್ತುತ್ತೇನೆ   ಕೆ ಎಸ್ ಈಶ್ವರಪ್ಪ
Advertisement

ಶಿವಮೊಗ್ಗ: ಇಂದು ಲೋಕಸಭೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಬಾರಿ ಹೆಚ್ಚು ಸದ್ದು ಮಾಡಿದ್ದು ಮಾತ್ರ ಶಿವಮೊಗ್ಗ ಕ್ಷೇತ್ರ. ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಎಷ್ಟೋ ವರ್ಷಗಳಿಂದ ಬಿಜೆಪಿಯಲ್ಲಿದ್ದ ಈಶ್ವರಪ್ಪ, ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಬಂಡಾಯವೆದ್ದರು. ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಮೋದಿಯವರ ಫೋಟೋ ಬೇರೆ ಬಳಸಿಕೊಂಡು ಪ್ರಚಾರ ಕೂಡ ಮಾಡಿದ್ದಾರೆ. ಇದೀಗ ಇಂದು ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ‌.

Advertisement
Advertisement

ಮತ ಚಲಾಯಿಸಿ ಮಾತನಾಡಿದ ಈಶ್ವರಪ್ಪ, ಎಂಟು ವಿಧಾನಸಭಾ ಕ್ಷೇತ್ರಗಳ ಮತದಾರರ ಬೆಂಬಲ ನನಗೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕೂಡ ತಾನೇ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿದ್ದು, ಕನಿಷ್ಠ ಎರಡು ಲಕ್ಷ ಅಂತರದ ಮತಗಳಿಂದ ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಎಲ್ಲರ ಕುತೂಹಲ ಶಿವಮೊಗ್ಗ ಕ್ಷೇತ್ರದ ಮೇಲಿದೆ. ಸತ್ಯ ಹಾಗೂ ನಾನು ಗೆಲ್ಲುತ್ತೇನೆ ಎಂಬ ನಿರೀಕ್ಷೆಯೂ ಅವರ ಮೇಲಿದೆ. ಸೋಲು ಖಚಿತ ಎಂಬುದು ಗೊತ್ತಾಗುತ್ತಿದ್ದಂತೆ ರಾಘವೇಂದ್ರ, ಈಶ್ವರಪ್ಪ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ತನ್ನ ವಿರುದ್ದ ಅಪಪ್ರಚಾರ ಮಾಡಿದರು.‌ಜನರ ಮುಂದೆ ಇಂಥ ಷಡ್ಯಂತ್ರಗಳೆಲ್ಲ ನಡೆಯಲ್ಲ. ಜನರ ಮನಸ್ಸಲ್ಲಿ ತನ್ನ ಚಿಹ್ನೆ ಅಚ್ಚ ಹಾಕಿದೆ. ಯಡಿಯೂರಪ್ಪ ಅವರು ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡು ಗೀತಾ ಶಿವರಾಜ್ ಕುಮಾರ್ ಅವರನ್ನು ಹಾಕಿಸಿಕೊಂಡರು. ಅವರೊಬ್ಬ ದುರ್ಬಲ ಅಭ್ಯರ್ಥಿ ಎಂದು. ಆದರೆ ಈ ಬಾರಿ ನಾನು ಗೆದ್ದು ಸಂಸತ್ ಪ್ರವೇಶ ಮಾಡುತ್ತೀನಿ. ಸಂಸತ್ ನಲ್ಲಿ ಮೋದಿ ಪರ ಕೈ ಎತ್ತುತ್ತೇನೆ ಎಂದಿದ್ದಾರೆ.

Advertisement

Tags :
Advertisement