ನಿಗಮ ಮಂಡಳಿ ಪಟ್ಟಿ ಅಂತಿಮ ಮಾಡಿಕೊಂಡೇ ಬರುತ್ತೇನೆ : ಡಿಕೆ ಶಿವಕುಮಾರ್
ಸರ್ಕಾರದಲ್ಲಿ ಅಸಮಾಧಾನಿತರನ್ನು ಸಮಾಧಾನ ಮಾಡುವುದಕ್ಕೆ ನಿಗಮ ಮಂಡಳಿಯೂ ಒಂದು ದಾರಿಯೇ ಸರಿ. ಆದರೆ ಸರ್ಕಾರ ರಚನೆಯಾಗಿ ಹಲವು ತಿಂಗಳಾದರೂ ಇನ್ನು ನಿಗಮ ಮಂಡಳಿಗಳ ಪಟ್ಟಿ ಫೈನಲ್ ಆಗಿಲ್ಲ. ಇದಕ್ಕೆ ಕಾರಣ, ಸಿಎಂ ಹಾಗೂ ಡಿಸಿಎಂ ಆಪ್ತ ಬಳಗದವರಿಗೆ ಸ್ಥಾನ ಸಿಗಬೇಕು ಎಂಬ ಹಠ. ಆದರೆ ಇಂದು ಇದರ ಪಟ್ಟಿ ಫೈನಲ್ ಮಾಡಿಕೊಂಡೇ ಬರುತ್ತಾರೆ ಎನ್ನಲಾಗುತ್ತಿದೆ.
ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಸಿಎಂ ಪ್ರವಾಸವಾಗುತ್ತಾರೆ. ಈಗಿನ ಹಂತದಲ್ಲಿ ಶಾಸಕರಿಗೆ ಮಾತ್ರ ಸಿಗಬಹುದು ಎಂದು ಹೇಳಲಾಗುತ್ತಿದೆ. ಆರಂಭದಲ್ಲಿಯೇ ಹಲವು ಷರತ್ತುಗಳನ್ನು ಹಾಕಲಾಗಿದೆ. ಈಗ ಹೈಕಮಾಂಡ್ ಬಳಿ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ. ಹೀಗಾಗಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ
ಅದಕ್ಕೂ ಮುನ್ನ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಕಳುಹಿಸಿದ್ದೇವೆ. ಈಗ ನಿಗಮ ಮಂಡಳಿ ಪಟ್ಟಿ ಫೈನಲ್ ಮಾಡಿಕೊಂಡೆ ಬರುತ್ತೇವೆ. ದೆಹಲಿ, ನಾಗಪುರದಲ್ಲಿ ನಡೆಯುವ CWC ಸಭೆಯಲ್ಲಿ ಬಾಗವಹಿಸುತ್ತೇವೆ ಎಂದು ದೆಹಲಿ ಪ್ರವಾಸದ ಬಗ್ಗೆ ತಿಳಿಸಿದ್ದಾರೆ.
ಇನ್ನು ನಿಗಮ ಮಂಡಳಿಗಳ ಸ್ಥಾನ ಪಡೆಯುವುದಕ್ಕೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಆದರೆ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಸ್ಥಾನವನ್ನು ನೀಡುತ್ತಿದ್ದಾರೆ. ಸ್ಥಾನ ನೀಡಿದ ಮೇಲೂ ಹಲವರು ಅಸಮಾಧಾನ ಹೊರ ಹಾಕಬಹುದು. ಹೀಗಾಗಿಯೇ ಮೊದಲೇ ಎಲ್ಲಾ ಷರತ್ತುಗಳನ್ನು ತಿಳಿಸಿ, ಪಟ್ಟಿ ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ನಿರ್ಧಾರ ಮಾಡಿಯೇ ಬರುತ್ತೇವೆ ಎಂದು ತಿಳಿಸಿದ್ದಾರೆ.