ಕೈಮುಗಿದು ಮನವಿ ಮಾಡುವೆ, ರಾಜಕಾರಣದ ಸುದ್ದಿಗೆ ಬರಬೇಡಿ : ಸ್ವಾಮೀಜಿಗಳಿಗೆ ಹೇಳಿದ ಡಿಕೆಶಿ
ಬೆಂಗಳೂರು: ಕೆಂಪೇಗೌಡ ಜಯಂತಿಯಂದು ತುಂಬಿದ್ದ ವೇದಿಕೆಯಲ್ಲಿ ಚಂದ್ರಶೇಖರ ಸ್ವಾಮೀಜಿ ಅವರು ಸಿಎಂ ಬದಲಾವಣೆಯ ವಿಚಾರವನ್ನು ಮಾತನಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದರು. ಇನ್ಮುಂದೆ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಿ ಎಂದಿದ್ದರು. ಸ್ವಾಮೀಜಿ ಹೇಳಿದ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಮೀಜಿಗಳಿಗೆ ಮನವಿ ಮಾಡಿಕೊಂಡಿದ್ದು, ಸಚುವರು, ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷವನ್ನು ಎಷ್ಟು ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇವೆ. ನಿಮಗೂ ಗೊತ್ತು. ನಿಮ್ಮ ಬಾಯಿಗೆ ಬೀಗ ಹಾಕಿ. ಇಲ್ಲದಿದ್ದರೆ ಪಕ್ಷದಿಂದ ನೋಟೀಸ್ ಜಾರಿ ಮಾಡಬೇಕಾಗುತ್ತದೆ. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ. ಆಶೀರ್ವಾದವೊಂದಿದ್ದರೆ ಸಾಕು. ರಾಜ್ಯದಲ್ಲಿ ಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ ಎಂದಿದ್ದಾರೆ.
ಇದೆ ವೇಳೆ ಸ್ಚಾಮೀಜಿಗಳ ಬಗ್ಗೆಯೂ ಮನವಿ ಮಾಡಿದ ಡಿಕೆ ಶಿವಕುಮಾರ್, ರಾಜರಾಕಣದ ವಿಚಾರಕ್ಕೆ ನೀವೂ ಬರಲು ಹೋಗಬೇಡಿ. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುವೆ. ಚಂದ್ರಶೇಖರ ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ. ನಿನ್ನೆ ನಾವೆಲ್ಲಾ ಎಂಪಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಕೂಡ ಬಂದಿದ್ದರು. ಮುಕ್ತವಾಗಿ ಅಲ್ಲಿ ಚರ್ಚೆಯಾಗಿದೆ. ನಾನು, ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಕೂತು ಮಾತನಾಡಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಎಂಎಲ್ಎ ಕೂಡ ಮಾತನಾಡುವ ಅಗತ್ಯವಿಲ್ಲ. ಎಐಸಿಸಿಯವರು ಹಾಗೂ ನಾನು ವಿಧಿಯಿಲ್ಲದೆ ನೋಟೀಸ್ ನೀಡಬೇಕಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.